ಆಲ್ಪ್ಸ್‌ನ ಅತಿ ದೊಡ್ಡ ನೀರ್ಗಲ್ಲು ಶತಮಾನದ ಕೊನೆಗೆ ಮಾಯ

Update: 2019-09-13 16:22 GMT

ಜಿನೀವ, ಸೆ. 13: ಹವಾಮಾನ ಬದಲಾವಣೆಯನ್ನು ತಡೆಗಟ್ಟಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ದೇಶಗಳು ವಿಫಲವಾದರೆ, ಆಲ್ಪ್ಸ್ ಪರ್ವತ ಸಾಲಿನಲ್ಲಿರುವ ಅತ್ಯಂತ ದೊಡ್ಡ ನೀರ್ಗಲ್ಲು ‘ಅಲೆಶ್’ ಈ ಶತಮಾನದ ಕೊನೆಯ ವೇಳೆಗೆ ಸಂಪೂರ್ಣವಾಗಿ ಅದೃಶ್ಯವಾಗುತ್ತದೆ ಎಂದು ಅಧ್ಯಯನವೊಂದು ಗುರುವಾರ ತಿಳಿಸಿದೆ.

ಭೂಮಿ ಈಗಿನ ಪ್ರಮಾಣದಲ್ಲೇ ಬಿಸಿಯಾಗುತ್ತಾ ಹೋದರೆ, ಅಲೆಶ್ ನೀರ್ಗಲ್ಲು ಹೇಗೆ ಬದಲಾಗುತ್ತದೆ ಎನ್ನುವುದನ್ನು ಸ್ವಿಟ್ಸರ್‌ಲ್ಯಾಂಡ್‌ನ ಸಂಶೋಧಕರ ತಂಡವೊಂದು ಅತ್ಯಾಧುನಿಕ ತಂತ್ರಜ್ಞಾನದ ಗ್ರಾಫಿಕ್ಸ್ ಮೂಲಕ ತೋರಿಸಿದೆ ಎಂದು ಝೂರಿಕ್‌ನ ಇಟಿಎಚ್ ತಾಂತ್ರಿಕ ವಿಶ್ವವಿದ್ಯಾನಿಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಸ್ವಿಟ್ಸರ್‌ಲ್ಯಾಂಡ್‌ನ ಆಲ್ಪ್ಸ್ ಪರ್ವತ ಶ್ರೇಣಿಯಲ್ಲಿ 86 ಚದರ ಕಿಲೋಮೀಟರ್ ವಿಸ್ತಾರದಲ್ಲಿ ಹಬ್ಬಿರುವ ಈ ನೀರ್ಗಲ್ಲಿನಲ್ಲಿ ಸುಮಾರು 1100 ಕೋಟಿ ಟನ್ ಹಿಮವಿದೆ ಎಂದು ಅಂದಾಜಿಸಲಾಗಿದೆ.

21ನೇ ಶತಮಾನದ ಆರಂಭದಿಂದ ಈವರೆಗೆ ಅದು ಸುಮಾರು ಒಂದು ಕಿಲೋಮೀಟರ್‌ನಷ್ಟು ವಿಸ್ತಾರವನ್ನು ಕಳೆದುಕೊಂಡಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News