ಸೆ.14: ಪುಸ್ತಕ ಬಿಡುಗಡೆ, ‘ಸೆಕ್ಯುಲರಿಸಂ ಮತ್ತು ರಾಷ್ಟ್ರೀಯತೆ’ ಸಂವಾದ

Update: 2019-09-13 16:32 GMT

ಬೆಂಗಳೂರು, ಸೆ.13: ಬೆಂಗಳೂರಿನ ಪರಸ್ಪರ ಮತ್ತು ಬಿ.ಎಂ.ಹನೀಫ್ ಓದುಗರ ಬಳಗದ ವತಿಯಿಂದ ಬಿ.ಎಂ.ಹನೀಫ್ ಅವರ ‘ಸೆಕ್ಯುಲರ್ ಸೇನಾನಿ ಸುಭಾಷ್‌ಚಂದ್ರ ಬೋಸ್’ ಪುಸ್ತಕದ ಬಿಡುಗಡೆ ಹಾಗೂ ‘ಸೆಕ್ಯುಲರಿಸಂ ಮತ್ತು ರಾಷ್ಟ್ರೀಯತೆ’ ಒಂದು ಸಂವಾದವನ್ನು ಸೆ.14ರಂದು ಸಂಜೆ 7 ಗಂಟೆಗೆ ನಗರದ ದಾರುಸ್ಸಲಾಂ ಕಟ್ಟಡದಲ್ಲಿರುವ ಬಿಫ್ಟ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್. ದ್ವಾರಕಾನಾಥ್ ಪುಸ್ತಕ ಬಿಡುಗಡೆ ಮಾಡಲಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಬ್ಯಾಂಕಿಂಗ್ ತಜ್ಞ ಎಸ್.ಎಸ್.ಎ.ಖಾದರ್, ಲೇಖಕ ಡಾ.ಸೈಯದ್ ಕಾಝಿಮ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 94486 96530, 81528 35091ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News