​ಬೆಲ್ಜಿಯಂ ಇಂಟರ್‌ನ್ಯಾಶನಲ್ ಚಾಲೆಂಜ್: ಲಕ್ಷ ಸೇನ್ ಫೈನಲ್‌ಗೆ

Update: 2019-09-14 09:17 GMT

ಲೆವೆನ್(ಬೆಲ್ಜಿಯಂ), ಸೆ.14: ಭಾರತದ ಉದಯೋನ್ಮುಖ ಶಟ್ಲರ್ ಲಕ್ಷ ಸೇನ್ ಬೆಲ್ಜಿಯಂ ಇಂಟರ್‌ನ್ಯಾಶನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ.
 

18ರ ಹರೆಯದ ಅಲ್ಮೋರದ ಸೇನ್ ಶುಕ್ರವಾರ ರಾತ್ರಿ 48 ನಿಮಿಷಗಳಲ್ಲಿ ಕೊನೆಗೊಂಡ ಸೆಮಿಫೈನಲ್ ಫೈಟ್‌ನಲ್ಲಿ ಡೆನ್ಮಾರ್ಕ್‌ನ ಕಿಮ್ ಬ್ರೂನ್‌ರನ್ನು 21-18, 21-11 ನೇರ ಗೇಮ್‌ಗಳಿಂದ ಮಣಿಸಿದರು.
ಏಶ್ಯನ್ ಜೂನಿಯರ್ ಚಾಂಪಿಯನ್ ಆಗಿರುವ ಲಕ್ಷ ಫೈನಲ್‌ನಲ್ಲಿ ಡೆನ್ಮಾರ್ಕ್‌ನ ಎರಡನೇ ಶ್ರೇಯಾಂಕದ ಆಟಗಾರ ವಿಕ್ಟರ್ ಸ್ವೆಂಡ್ಸನ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News