ಮತ್ತೆ ಸದ್ದು ಮಾಡುತ್ತಿದೆ 'ವಿಷನ್ ಬೆಂಗಳೂರು- 2050' ಯೋಜನೆ

Update: 2019-09-14 16:47 GMT

ಬೆಂಗಳೂರು, ಸೆ.14: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ‘ವಿಷನ್ ಬೆಂಗಳೂರು- 2050’ ಯೋಜನೆ ಮತ್ತೆ ಸದ್ದು ಮಾಡುತ್ತಿದೆ.

ಮುಖ್ಯಮಂತ್ರಿಗಳ ದೂರದೃಷ್ಟಿಯಂತೆ, ‘ಬೆಂಗಳೂರು ವಿಷನ್-2050’ ಕೈಪಿಡಿ ತಯಾರಿಸಲು ಮುಂದಾಗಿದ್ದೇವೆ. ಇದಕ್ಕಾಗಿ ಪ್ರತ್ಯೇಕ ನಗರ ಯೋಜನಾ ತಂಡ ರಚನೆಯಾಗುತ್ತಿದೆ, ಇದರಲ್ಲಿ ನಗರ ಯೋಜನೆ ವಿಭಾಗದ ತಜ್ಞರು ಇರಲಿದ್ದು, ಕೈಪಿಡಿಯ ಕರಡು ಪ್ರತಿಯನ್ನು ತಯಾರಿಸಲಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಬಿಬಿಎಂಪಿ ‘ವಿಷನ್-2050’ ಯೋಜನೆ ಕೈಗೊಳ್ಳುತ್ತಿದೆ. ಇದನ್ನು ನಗರದ ನಾಗರಿಕರ ಸಹಕಾರವಿದ್ದರೆ ಮಾತ್ರವೇ ಯೋಜಿಸಿ, ಅನುಷ್ಠಾನಗೊಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ನಗರದ ಎಲ್ಲ ನಾಗರಿಕರು ಪಾಲ್ಗೊಳ್ಳಬೇಕು ಎಂದು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಪ್ರಸ್ತಾಪ

ಸಿದ್ದರಾಮಯ್ಯ ಸರಕಾರದ ಅವಧಿಯಲ್ಲೇ ಬೆಂಗಳೂರು ವಿಷನ್-2050 ಪ್ರಸ್ತಾವನೆಯಾಗಿತ್ತು. ಆದರೆ, ಈ ಯೋಜನೆಯನ್ನು ಪ್ರಶ್ನಿಸಿ, ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಸಂವಿಧಾನಬದ್ಧ ಬೆಂಗಳೂರು ಮಹಾನಗರ ಯೋಜನಾ ಸಮಿತಿ ಅಸ್ತಿತ್ವದಲ್ಲಿರಬೇಕಾದರೆ ಮತ್ತೊಂದು ಪೂರಕ ಸಂಸ್ಥೆ ಬೆಂಗಳೂರು ವಿಷನ್ ಗ್ರೂಪ್ ರಚನೆ ಅಗತ್ಯ ಇಲ್ಲ ಎಂದು ಹೈಕೋರ್ಟ್ ಚಾಟಿ ಬೀಸಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ರಾಜ್ಯ ಸರಕಾರ ವಿಷನ್ ಗ್ರೂಪ್ ಯೋಜನೆಯನ್ನು ರದ್ದುಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News