ಭಾರತದ ಕಳಪೆ ಆರಂಭ

Update: 2019-09-14 18:32 GMT

ಕಝಖ್‌ಸ್ತಾನ, ಸೆ.14: ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನ ಮೊದಲ ದಿನವಾದ ಶನಿವಾರ ಭಾರತ ಕಳಪೆ ಆರಂಭ ಪಡೆದಿದೆ. ನಾಲ್ವರು ಗ್ರೀಕೊ-ರೋಮನ್ ಕುಸ್ತಿಪಟುಗಳು ಮೊದಲ ಸುತ್ತಿನಲ್ಲಿ ಎಡವಿದ್ದಾರೆ.

 ಒಲಿಂಪಿಕ್ಸ್‌ಯೇತರ ವಿಭಾಗಗಳಲ್ಲಿ ಸ್ಪರ್ಧಿಸಿದ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತ ಹರ್‌ಪ್ರೀತ್ ಸಿಂಗ್(82ಕೆಜಿ), ಸಾಗರ್(63ಕೆಜಿ) ಹಾಗೂ ಮಂಜೀತ್(55ಕೆಜಿ)ತಮ್ಮ ವಿಭಾಗದಲ್ಲಿ ಒಂದೂ ಅಂಕವನ್ನು ಗಳಿಸದೇ ಭಾರೀ ನಿರಾಸೆಗೊಳಿಸಿದರು. 72 ಕೆಜಿ ವಿಭಾಗದಲ್ಲಿ ಅಮೆರಿಕದ ಎದುರಾಳಿ ರೇಮಂಡ್ ಅಂಥೋನಿಗೆ 5-6 ಅಂತರದಿಂದ ಸೋಲುವ ಮೊದಲು ಒಂದಷ್ಟು ಪ್ರತಿರೋಧ ಒಡ್ಡಿದರು.

ಇದೀಗ ಭಾರತೀಯ ಕುಸ್ತಿಪಟುಗಳ ವಿರುದ್ಧ ಜಯ ಸಾಧಿಸಿರುವವರು ಫೈನಲ್‌ಗೆ ತಲುಪಿದರೆ ಭಾರತದ ಕುಸ್ತಿಪಟುಗಳಿಗೆ ಕಂಚಿನ ಪದಕಕ್ಕಾಗಿ ರಿಪಿಚೇಜ್ ಸುತ್ತಿನಲ್ಲಿ ಆಡುವ ಅವಕಾಶ ಲಭ್ಯವಾಗಲಿದೆ.

82 ಕೆಜಿ ವಿಭಾಗದಲ್ಲಿ ಹರ್‌ಪ್ರೀತ್ ಸಿಂಗ್ ಕನಿಷ್ಠ ಪಕ್ಷ ಉತ್ತಮ ಹೋರಾಟ ನೀಡುವ ನಿರೀಕ್ಷೆಯಿತ್ತು. ಆದರೆ, ಅವರು ಝೆಕ್ ಗಣರಾಜ್ಯದ ಪೀಟರ್ ನೊವಾಕ್‌ಗೆ 7-0 ಅಂತರದಿಂದ ಶರಣಾದರು. ಮಂಜೀತ್ ಗೆಲುವಿಗಾಗಿ ಎಲ್ಲ ಪ್ರಯತ್ನ ಹಾಕಿದರೂ ಟೆಕ್ನಿಕಲ್ ಪಾಯಿಂಟ್‌ನಲ್ಲಿ ಸೋತರು. 63 ಕೆಜಿ ವಿಭಾಗದಲ್ಲಿ ಸಾಗರ್ ಕೇವಲ ಎರಡು ನಿಮಿಷ ಮ್ಯಾಟ್‌ನಲ್ಲಿ ನಿಂತಿದ್ದರು. ಸ್ಥಳೀಯ ಕುಸ್ತಿಪಟು ಅಲ್ಮಾಟ್ ಕೆಬಿಸ್‌ಪಾಯೆವ್‌ಗೆ ಟೆಕ್ನಿಕಲ್ ಅಂಕದಿಂದ ಶರಣಾದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News