ವಿಶ್ವೇಶ್ವರಯ್ಯ ಹೀಗೊಂದು ನೆನಪು

Update: 2019-09-15 06:22 GMT

ರಾಜಕೀಯ ಮುತ್ಸದ್ದಿ, ಅರ್ಥಶಾಸ್ತ್ರಜ್ಞ ಹಾಗೂ ದಕ್ಷ ಇಂಜಿನಿಯರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು ಭಾರತದ ನಿರ್ಮಾಣಕ್ಕೆ ಭದ್ರಬುನಾದಿ ಹಾಕಿದ ಮಹಾನ್ ವ್ಯಕ್ತಿಗಳಲ್ಲೊಬ್ಬರು ಎಂಬುದರಲ್ಲಿ ಎರಡು ಮಾತಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ 1861ರ ಸೆಪ್ಟಂಬರ್ 15ರಂದು ಜನಿಸಿದ ವಿಶ್ವೇಶ್ವರಯ್ಯ ಅವರು ತನ್ನ ಶಾಲಾ ಶಿಕ್ಷಣವನ್ನು ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರಿನಲ್ಲಿ ಕೈಗೊಂಡರು. 1883ರಲ್ಲಿ ಇಂಜಿನಿಯರಿಂಗ್ ಪದವಿ ಪೂರೈಸಿದ ಅವರು, ಬಳಿಕ ಬಾಂಬೆ ಸಂಸ್ಥಾನದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದರು ಹಾಗೂ ಅಲ್ಲಿ ಮುಂದಿನ 25 ವರ್ಷಗಳ ಕಾಲ ಕೆಲಸ ಮಾಡಿದರು.

ಆದಾಗ್ಯೂ, ಮೈಸೂರು ಸಂಸ್ಥಾನದಲ್ಲಿ ಮುಖ್ಯ ಇಂಜಿನಿಯರ್ (ಆನಂತರ ದಿವಾನ) ಆಗಿ ಕಾರ್ಯನಿರ್ವ ಹಿಸಿದ ಅವಧಿಯು ಅವರು ತನ್ನ ವೃತ್ತಿ ಬದುಕಿನ ಸಾಧನೆಯ ಉತ್ತುಂಗ ಶಿಖರಕ್ಕೇರಿದ್ದರು. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಮೈಸೂರು ಪೇಪರ್ ಮಿಲ್ಸ್‌ನಿಂದ ಹಿಡಿದು ಭದ್ರಾವತಿಯ ಈ ಅವಧಿಯಲ್ಲಿ ಅವರು ಕೈಗೊಂಡ ಪ್ರತಿಯೊಂದು ಉಪಕ್ರಮಗಳು ಇಂದು ಕೂಡಾ ಉತ್ತಮ ಫಲವನ್ನು ನೀಡುತ್ತಿವೆ. ಮೈಸೂರಿನ ದಿವಾನರಾಗಿ ವಿಶ್ವೇಶ್ವರಯ್ಯ ಅಪಾರ ಕೊಡುಗೆಗಳ ಬಗ್ಗೆ ಬಹುತೇಕ ಭಾರತೀ ಯರಿಗೆ ತಿಳಿದಿದೆ. 1920ರ ದಶಕದಲ್ಲೇ ಹೈದರಾಬಾದನ್ನು ಪ್ರವಾಹ ಮುಕ್ತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

 ವಿಶ್ವೇಶ್ವರಯ್ಯ ಅವರ 156ನೇ ಜನ್ಮದಿನವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಇಂಜಿನಿಯರ್‌ಗಳ ದಿನವಾಗಿಯೂ ಅವರು ಜನ್ಮದಿನವನ್ನು ಆಚರಿಸಲಾಗುತ್ತಿದೆ. ಸರ್ ಎಂ.ವಿಶ್ವೇಶ್ವರಯ್ಯ ಅವರ ಇಂಜಿನಿಯರಿಂಗ್ ಕೌಶಲ್ಯಕ್ಕೆ ಹೈದರಾಬಾದ್ ನಗರವು ಇಂದಿಗೂ ಸಾಕ್ಷಿಯಾಗಿದೆ.

1908ರಲ್ಲಿ ವಿಶ್ವೇಶ್ವರಯ್ಯ ಅವರು ದಿವಾನ ಹುದ್ದೆಯಿಂದ ಸ್ವಯಂಪ್ರೇರಿತವಾಗಿ ನಿವೃತ್ತರಾಗಿದ್ದರು. ಆನಂತರ ಅವರು ಪಾಶ್ಚಾತ್ಯ ಜಗತ್ತಿನಲ್ಲಿ ಕೈಗಾರೀಕರಣಗೊಂಡ ರಾಷ್ಟ್ರಗಳಲ್ಲಿ ಪ್ರಚಲಿತದಲ್ಲಿರುವ ವ್ಯವಸ್ಥೆಗಳು ಹಾಗೂ ವಿನ್ಯಾಸಗಳ ಬಗ್ಗೆ ಅಧ್ಯಯನ ನಡೆಸಲು ವಿಶ್ವಪ್ರವಾಸವನ್ನು ಕೈಗೊಂಡರು. ಆಧುನಿಕ ಭಾರತದ ಅಭಿವೃದ್ಧಿಯ ನೂತನ ದೃಷ್ಟಿಕೋನದೊಂದಿಗೆ 1909ರಲ್ಲಿ ಅವರು ತಾಯ್ನಿಡಿಗೆ ಮರಳಿದರು.

ವಿಶ್ವೇಶ್ವರಯ್ಯ ಅವರು ವಿಶ್ವಪ್ರವಾಸವನ್ನು ಕೈಗೊಂಡ ಸಂದರ್ಭದಲ್ಲಿ ಹೈದರಾಬಾದ್ ನಗರವು ಭೀಕರ ಪ್ರವಾಹಕ್ಕೆ ತುತ್ತಾಗಿತ್ತು. 1908ರ ಸೆಪ್ಟಂಬರ್ 28ರಂದು ಮೇಘ ಸ್ಫೋಟವುಂಟಾಗಿ ಧಾರಾಕಾರ ಮಳೆ ಸುರಿದ ಬಳಿಕ ಮುಸಿ ನದಿಯು ಉಕ್ಕಿ ಹರಿದು ನಗರದ ಬೀದಿಗಳು ಜಲಾವೃತ ಗೊಂಡಿತು. ನೆರೆ ನೀರು ಸಣ್ಣ ನೀರಾವರಿ ಜಲಾಶಯಗಳಲ್ಲಿ ತುಂಬಿದ ಕಾರಣ, ಒತ್ತಡ ತಾಳಲಾರದೆ ಜಲಾಶಯಗಳ ಕಟ್ಟೆಗಳು ಒಡೆದು ಹೋದವು.

 ಪ್ರವಾಹದ ಮಟ್ಟವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿ, ಅನೇಕ ಸಂಖ್ಯೆಯ ಸಾವು, ನಾಶ,ನಷ್ಟ ಸಂಭವಿಸಿತ್ತು. 19 ಸಾವಿರಕ್ಕೂ ಅಧಿಕ ಮನೆಗಳು ಕುಸಿದು ಬಿದ್ದಿದ್ದವು ಹಾಗೂ 15 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು ಹಾಗೂ ನಗರದ ಜನಸಂಖ್ಯೆಯ ಮೂರನೇ ಒಂದರಷ್ಟು ಅಂದರೆ ಸುಮಾರು 1 ಲಕ್ಷ ಜನರು ನಿರ್ಗತಿಕರಾದರು.

ಈ ಹಿಂದೆಯೂ ಹೈದರಾಬಾದ್‌ನಲ್ಲಿ ಮುಸಿ ನದಿ ಉಕ್ಕಿ ಹರಿದು ಕನಿಷ್ಠ 12 ಮಂದಿ ಸಾವನ್ನಪ್ಪಿದ್ದರು. ಆದರೆ 1908 ರಲ್ಲಿ ಸಂಭವಿಸಿದ ಪ್ರವಾಹವು ಅತ್ಯಂತ ಭೀಕರವಾಗಿತ್ತು. ಹೈದರಾಬಾದ್‌ನ ಆರನೇ ನಿಝಾಮರಾದ ಮೆಹಬೂಬ್ ಅಲಿ ಖಾನ್ ಖುದ್ದಾಗಿ ಪರಿಹಾರ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸಿದರು ಹಾಗೂ ಸಂತ್ರಸ್ತರಿಗೆ ಪರಿಹಾರ ಪೂರೈಕೆಗಳನ್ನು ವಿತರಿಸಿದರು. ಸಂತ್ರಸ್ತರಿಗೆ ಆಶ್ರಯ ನೀಡುವುದಕ್ಕಾಗಿ ತನ್ನ ಅರಮನೆಯ ದ್ವಾರಗಳನ್ನೇ ತೆರೆದಿಟ್ಟರು. ತನ್ನ ಅರಮನೆಯ ಅಡುಗೆಮನೆಗಳಲ್ಲಿ ಸುಮಾರು 5 ಲಕ್ಷ ಸಂತ್ರಸ್ತರಿಗೆ ಉಣಿಸುವ ವ್ಯವಸ್ಥೆ ಮಾಡಲಾಯಿತು.

ಭವಿಷ್ಯದಲ್ಲಿ ಇಂತಹ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಮೆಹಬೂಬ್ ಖಾನ್ ಅವರು ಹಲವಾರು ಕ್ರಮಗಳನ್ನು ಕೈಗೊಂಡರು. ಹೈದರಾಬಾದ್‌ನ ಪ್ರವಾಹ ನಿರ್ವಹಣಾ ಯೋಜನೆ ಸಲಹೆಗಾರ ಹಾಗೂ ಸಮಾಲೋಚಕರಾಗಿ ವಿಶ್ವೇಶ್ವರಯ್ಯ ಅವರನ್ನು ನಿಯೋಜಿಸಿದರು. ಬ್ರಿಟಿಷರು ತಮ್ಮದೇ ಆದ ತಜ್ಞರ ತಂಡವನ್ನು ಕಳುಹಿಸಲು ಬಯಸಿದ್ದರು. ಆದರೆ ವಿಶ್ವೇಶ್ವರಯ್ಯ ಅವರ ಇಂಜಿನಿಯರಿಂಗ್ ನೈಪುಣ್ಯತೆಯನ್ನು ಅರಿತಿದ್ದ ನಿಝಾಮ, ಅವರನ್ನೇ ಈ ಮಹತ್ವದ ಯೋಜನೆಗೆ ನಿಯೋಜಿಸಿದ್ದರು.

ನಗರದಲ್ಲಿ ಪ್ರವಾಹ ನಿಯಂತ್ರಣ ಕ್ರಮಗಳ ಬಗ್ಗೆ ಅಧ್ಯಯನ ನಡೆಸಲು ಒಪ್ಪಿಕೊಂಡ ವಿಶ್ವೇಶ್ವರಯ್ಯ ಅವರು ಕೆಲವೊಂದು ಶರತ್ತುಗಳನ್ನು ಮುಂದಿಟ್ಟರು. ತನಗೆ ಬ್ರಿಟಿಷ್ ತಜ್ಞರಿಗೆ ನೀಡುವಷ್ಟೇ ವೇತನವನ್ನು ನೀಡಬೇಕು ಮತ್ತು ತಾನು ಬಯಸಿದವರನ್ನು ನಿಯೋಜಿಸುವ ಸ್ವಾತಂತ್ರವನ್ನು ತನಗೆ ನೀಡಬೇಕು. ಈ ಎಲ್ಲಾ ಶರತ್ತುಗಳಿಗೆ ಒಪ್ಪಿಗೆಯಾದ ಕೂಡಲೇ, ವಿಶ್ವೇಶ್ವರಯ್ಯನವರು ತನ್ನ ಎಂದಿನ ದಕ್ಷತೆಯೊಂದಿಗೆ ತನ್ನ ಕೆಲಸವನ್ನು ಆರಂಭಿಸಿದರು.

ವಿಶ್ವೇಶ್ವರಯ್ಯ ಅವರು ಭಾರತದ ವಿವಿಧ ಭಾಗಗಳಲ್ಲಿ ಅದರಲ್ಲೂ ವಿಶೇಷವಾಗಿ ಬಾಂಬೆ ಹಾಗೂ ಮದ್ರಾಸ್‌ಗಳಲ್ಲಿ ಸುರಿದ ಮಳೆಯ ಪ್ರಮಾಣಕ್ಕೆ ಸಂಬಂಧಿಸಿ ದತ್ತಾಂಶಗಳನ್ನು ಸಂಗ್ರಹಿಸಿದರು. ಈ ಸಮಸ್ಯೆಯ ಕುರಿತಾದ ಇಂಜಿನಿಯರಿಂಗ್ ಅಂಶಗಳನ್ನು ತಿಳಿದುಕೊಳ್ಳುವ ಮುನ್ನ ಅವರು ಹೈದರಾಬಾದ್ ನಗರದ ನದಿಗಳು ಹಾಗೂ ಜಲಾಶಯಗಳ ಜಾಲದ ಕುರಿತಾಗಿ ಸಮೀಕ್ಷೆಯನ್ನು ನಡೆಸಿದರು.

ಹೈದರಾಬಾದನ್ನು ಬಾಧಿಸುತ್ತಿರುವ ಪ್ರವಾಹದ ಸಮಸ್ಯೆಗೆ ವಿಶ್ವೇಶ್ವರಯ್ಯ ಅವರು ಕಂಡುಕೊಂಡ ಪರಿಹಾರವೆಂದರೆ ನಗರದ ಮೇಲ್ಭಾಗದಲ್ಲಿ ಜಲಾಶಯವೊಂದನ್ನು ಸ್ಥಾಪಿಸುವುದು. ಈ ಜಲಾಶಯವು ಮುಸಿ ನದಿಯು ಉಕ್ಕಿ ಹರಿದಾಗ, ಹೆಚ್ಚುವರಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಮೂಲಕ ನೆರೆಯನ್ನು ನಿಯಂತ್ರಿಸುತ್ತದೆ. 1909ರ ಅಕ್ಟೋಬರ್ 1ರಂದು ಅವರು ಈ ಕುರಿತ ವರದಿಯನ್ನು ಸಲ್ಲಿಸಿದರು. ನಗರ ಅಭಿವೃದ್ಧಿ ಮಂಡಳಿಯ ಸ್ಥಾಪನೆ ಹಾಗೂ ಪ್ರವಾಹ ತಡೆ ಕಾರ್ಯಗಳಿಗಾಗಿ ಅದಕ್ಕ್ಕೆ ಮುಂದಿನ ಆರು ವರ್ಷಗಳವರೆಗೆ ವರ್ಷಂಪ್ರತಿ 20 ಲಕ್ಷ ರೂ.ಗಳ ಅನುದಾನ ಒದಗಿಸುವುದು ಕೂಡಾ ಈ ಶಿಫಾರಸಿನಲ್ಲಿ ಒಳಗೊಂಡಿದ್ದವು. 1909ರಲ್ಲಿ ಅವರು ಸಲ್ಲಿಸಿದ ಪ್ರವಾಹದ ವಿವರ, ಅದರ ಕಾರಣಗಳು ಹಾಗೂ ಪ್ರಸ್ತಾವಿತ ತಡೆಗಟ್ಟುವಿಕೆ ಕ್ರಮಗಳು (the flood of 1908 at Hyderabad- An account of the flood, Its causes and proposed Preventive measures)ಎಂಬ ಶೀರ್ಷಿಕೆಯಡಿ ಪ್ರಕಟಿಸಲಾದ ವರದಿಯ ಆಯ್ದ ಅಂಶಗಳನ್ನು ಇಲ್ಲಿ ನೀಡಲಾಗಿದೆ.

‘‘ಇಕ್ಕೆಲಗಳಲ್ಲಿಯೂ ನೆರೆ ತಡೆಯುವ ಒಡ್ಡುಗಳನ್ನು, ಪ್ರವಾಹದ ಮಟ್ಟಕ್ಕಿಂತ 5 ಅಡಿ ಎತ್ತರದವರೆಗೆ ನಿರ್ಮಿಸಬೇಕು. ಈ ಒಡ್ಡುಗಳನ್ನು ನಗರದ ವಿಶಾಲವಾದ ರಾಜಮಾರ್ಗಗಳ ಉದ್ದಕ್ಕೂ ನಿರ್ಮಿಸಬೇಕು. ಈ ರಾಜಮಾರ್ಗಗಳು ನಗರದ ಜೀವನಾಡಿಗಳಾಗಿವೆ. ಹೆಚ್ಚಾಗಿ ಪಾದಚಾರಿ ರಸ್ತೆಗಳನ್ನು ಹಾಗೂ ಬೀದಿಗಳನ್ನು ಹೆಚ್ಚಾಗಿ ಬಳಸುವ ಬಡವರು ಕೂಡಾ ಶ್ರೀಮಂತರಷ್ಟೇ ಸ್ವಚ್ಛವಾದ ನೆರಳಿನಿಂದ ಕೂಡಿದ ಉತ್ತಮ ನಿರ್ವಹಣೆಯ ರಸ್ತೆಗಳು ಹಾಗೂ ಆಸುಪಾಸಿನ ರಮಣೀಯ ಪರಿಸರದ ಪ್ರಯೋಜನ ಪಡೆಯಲಿದ್ದಾರೆ. ನದಿಯ ದಡವು ಆರೋಗ್ಯಕರ ಹಾಗೂ ಮನೋಹರವಾಗಿಡುವ ಅವಕಾಶವನ್ನು ಸರಕಾರವು ಕಳೆದುಕೊಳ್ಳದೆ ಇರುವುದು ಅತ್ಯಂತ ಮಹತ್ವದ್ದಾಗಿದೆ.

ವಿಶ್ವೇಶ್ವರಯ್ಯ ಅವರ ಶಿಫಾರಸುಗಳನ್ನು, ಜಾಗರೂಕತೆ ಯೊಂದಿಗೆ ಸ್ವೀಕರಿಸಲಾಯಿತು ಹಾಗೂ ಹೈದರಾಬಾದ್ ನಗರದ ಮೇಲೆ ಉಸ್ಮಾನ್ ಸಾಗರ್ ಹಾಗೂ ಹಸನ್ ಸಾಗರ್ ಎಂಬ ಎರಡು ಜಲಾಶಯಗಳ ನಿರ್ಮಾಣ ಕಾರ್ಯ ಆರಂಭಗೊಂಡಿತು.(ಒಂದು ಜಲಾಶಯವನ್ನು ಮುಸಿ ನದಿಗೆ ಅಡ್ಡಲಾಗಿ ಕಟ್ಟಿದ್ದರೆ, ಇನ್ನೊಂದು ಅದರ ಉಪನದಿಯಾದ ಎಸಿ ನದಿಗೆ ಕಟ್ಟಲಾಯಿತು). ಇದರ ಜೊತೆಗೆ ಆಧುನಿಕ ವ್ಯವಸ್ಥೆಯ ಭೂಗತ ಚರಂಡಿ ಕಾಮಗಾರಿಯನ್ನು ಕೂಡಾ ನಡೆಸಲಾಯಿತು.

ಹಾನಿಗೀಡಾದ ಗೋಡೆಗಳನ್ನು ಪುನರ್‌ನಿರ್ಮಿಸಲಾಯಿತು. ಅಸ್ತಿತ್ವದಲ್ಲಿರುವ ತಡೆಗೋಡೆಗಳನ್ನು ಬಲಪಡಿಸಲಾಯಿತು. 1912ರಲ್ಲಿ ಆರೈಶೆ ಬಾಲ್ಡಾ (ನಗರಾಭಿವೃದ್ಧಿ ಮಂಡಳಿ) ಸ್ಥಾಪನೆಯಾದ ಬಳಿಕ ಚಾರ್‌ಮಿನಾರ್ ಹಾಗೂ ಮುಸಿ ನದಿ ನಡುವಿನ ಪ್ರದೇಶವನ್ನು ಪುನಾರಚಿಸಲಾಯಿತು. ನದಿ ದಂಡೆಯ ಪಕ್ಕದಲ್ಲಿದ್ದ ಮಲಿನಯುಕ್ತ ಹಾಗೂ ಮಿತಿಮೀರಿದ ಜನಸಾಂಧ್ರತೆಯ ವಸತಿ ಪ್ರದೇಶಗಳನ್ನು ತೆರವುಗೊಳಿಸಿ, ಉದ್ಯಾನವನಗಳನ್ನು ನಿರ್ಮಿಸಲಾಯಿತು. ಉಸ್ಮಾನಿಯಾ ಜನರಲ್ ಆಸ್ಪತ್ರೆ, ಹೈಕೋರ್ಟ್ ಹಾಗೂ ರಾಜ್ಯ ಕೇಂದ್ರ ಗ್ರಂಥಾಲಯವಿರುವ ಪ್ರದೇಶದಲ್ಲಿ ರಾಜಮಾರ್ಗ ನಿರ್ಮಿಸಲಾಯಿತು.

1911ರಲ್ಲಿ ಮೆಹಬೂಬ್ ಅಲಿ ಖಾನ್ ನಿಧನರಾದರು. ಏಳನೇ ನಿಜಾಮರಾದ ಮೀರ್ ಉಸ್ಮಾನ್ ಅಲಿ ಖಾನ್ ಈ ಯೋಜನೆಯನ್ನು ಅನುಷ್ಠಾನಗೊಳಿಸಿದರು. ಉಸ್ಮಾನ್ ಸಾಗರ್ ಜಲಾಶಯದ ನಿರ್ಮಾಣ 1920ರಲ್ಲಿ ಪೂರ್ಣಗೊಂಡರೆ, ಹಿಮಾಯತ್ ಸಾಗರ್ 1927ರಲ್ಲಿ ಪೂರ್ತಿಗೊಂಡಿತು. ಹೈದರಾಬಾದ್ ಜನತೆಯ ಪಾಲಿಗೆ ಈ ಎರಡು ಜಲಾಶಯಗಳ ನಿರ್ಮಾಣವು ಮಹತ್ತರವಾದ ತಿರುವಾಗಿ ಪರಿಣಮಿಸಿತು.ಆಗಾಗ್ಗೆ ಹೈದರಾಬಾದ್ ನಗರವನ್ನು ಕಾಡುತ್ತಿದ್ದ ಮುಸಿ ನಗರದ ಪ್ರವಾಹವನ್ನು ಹತೋಟಿಗೆ ತರಲಾಯಿತು.

ಆದಾಗ್ಯೂ ತರುವಾಯ ಅಧಿಕಾರಕ್ಕೇರಿದ ಆಡಳಿತಗಾರರು ಹಾಗೂ ಸರಕಾರಗಳು ವಿಶ್ವೇಶ್ವರಯ್ಯ ಅವರು ವಿನ್ಯಾಸಗೊಳಿಸಿದ ಪ್ರವಾಹ ನಿರ್ವಹಣಾ ವ್ಯವಸ್ಥೆಯಲ್ಲಿ ಹೆಚ್ಚಿನದ್ದೇನೂ ಸುಧಾರಣೆಯನ್ನು ಮಾಡಲಿಲ್ಲ. 2000ನೇ ಇಸವಿಯ ಆಗಸ್ಟ್ ತಿಂಗಳಲ್ಲಿ ಹೈದರಾಬಾದ್‌ನಲ್ಲಿ ಧಾರಾಕಾರ ಮಳೆ ಸುರಿದು, ನಗರವು ಮತ್ತೆ ಪ್ರವಾಹದ ದವಡೆಗೆ ಸಿಲುಕಿತು. 1908ರ ಬಳಿಕ ಹೈದರಾಬಾದ್ ಕಂಡ ಅತ್ಯಂತ ಭೀಕರ ಪ್ರವಾಹ ಅದಾಗಿತ್ತು. ನಗರದ 90ಕ್ಕೂ ಅಧಿಕ ವಸತಿ ಪ್ರದೇಶಗಳು ನೆರೆ ನೀರಿನಲ್ಲಿ ಮುಳುಗಡೆಯಾಗಿದ್ದವು.

ಈಗಲೂ ಹೈದರಾಬಾದ್ ನಗರವು ಭಾರೀ ಪ್ರವಾಹದ ಭೀತಿಯನ್ನು ಎದುರಿಸುತ್ತಿದೆ. ಭಾರತದ ಅತ್ಯಂತ ಮೇಧಾವಿ ಇಂಜನಿಯರ್ ಎನಿಸಿರುವ ಸರ್ ಎಂ.ವಿಶ್ವೇಶ್ವರಯ್ಯ ಅವರಿಂದ ಸ್ಫೂರ್ತಿ ಪಡೆದು, ನಗರಕ್ಕೆ ಪರಿಣಾಮಕಾರಿಯಾದ ಪ್ರವಾಹ ನಿರ್ವಹಣಾ ಯೋಜನೆಯನ್ನು ಕಾರ್ಯಗತಗೊಳಿಸಲು ಇದು ಸಕಾಲವಾಗಿದೆ. ಹೈದರಾಬಾದ್ ಅನ್ನು ಪ್ರವಾಹ ಮುಕ್ತಗೊಳಿಸಿದ ಈ ಮಹಾನ್ ವ್ಯಕ್ತಿಯನ್ನು ಸ್ಮರಿಸಲು ಅದಕ್ಕಿಂತ ಬೇರೆ ಮಾರ್ಗ ಇನ್ನೊಂದಿರಲಾರದು.

ಕೃಪೆ: www.thebetterindia.com

Writer - ಸಂಚಾರಿ ಪಾಲ್

contributor

Editor - ಸಂಚಾರಿ ಪಾಲ್

contributor

Similar News