×
Ad

ಉದ್ಯೋಗಕ್ಕಾಗಿ ಯುವಜನರಿಂದ ಸೆ.16ರಂದು ದುಂಡು ಮೇಜಿನ ಸಭೆ

Update: 2019-09-15 22:38 IST

ಬೆಂಗಳೂರು, ಸೆ.15: ದೇಶ ಹಾಗೂ ರಾಜ್ಯದಲ್ಲಿನ ಉದ್ಯೋಗ ನಷ್ಟವನ್ನು ತಡೆದು, ಉದ್ಯೋಗ ಸೃಷ್ಟಿಯಾಗುವಂತೆ ಮಾರ್ಗೋಪಾಯಗಳ ಕುರಿತು ಚರ್ಚಿಸಲು ಉದ್ಯೋಗಕ್ಕಾಗಿ ಯುವಜನರ ವೇದಿಕೆ ವತಿಯಿಂದ ಸೆ.16ರ ಬೆಳಗ್ಗೆ 10.30ಕ್ಕೆ ಶಾಸಕರ ಭವನದಲ್ಲಿ ದುಂಡು ಮೇಜಿನ ಸಭೆ ಕರೆಯಲಾಗಿದೆ.

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಅಮಿತ್ ಬಾಸೂಲೆ, ರೈತ ನಾಯಕಿ ಚುಕ್ಕಿ ನಂಜುಂಡ ಸ್ವಾಮಿ, ಸಣ್ಣ ಕೈಗಾರಿಕಾ ಒಕ್ಕೂಟ(ಕಾಸಿಯಾ)ದ ಪ್ರತಿನಿಧಿಗಳು, ಪೀಣ್ಯ ಕೈಗಾರಿಕಾ ಪ್ರದೇಶದ ಪ್ರತಿನಿಧಿಗಳು, ಅಣೆಕಟ್ಟೆ ವಿಶ್ವನಾಥ್, ಕರ್ನಾಟಕ ಜನಶಕ್ತಿ ಡಾ.ವಾಸು, ಮಲ್ಲಿಗೆ, ರಣಧೀರ ಪಡೆಯ ಕಾರ್ಯಕರ್ತರು, ವಿದ್ಯಾರ್ಥಿ ಒಕ್ಕೂಟದ ಸರೋವರ್ ಹಾಗೂ ಉದ್ಯೋಗಕ್ಕಾಗಿ ಯುವಜನರು ವೇದಿಕೆಯ ಕಾರ್ಯಕರ್ತರು ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಇದರ ಜೊತೆಗೆ ಉದ್ಯೋಗ ಸಮಸ್ಯೆಯನ್ನು ಎದುರಿಸುತ್ತಿರುವ ವಿವಿಧ ರಂಗದ ಉದ್ಯಮಶೀಲರು, ಉದ್ದಿಮೆಗಳು ಮತ್ತು ಕೈಗಾರಿಕೆಗಳ ಮುಖ್ಯಸ್ಥರು, ಪರ್ಯಾಯ ಉದ್ಯೋಗ ಸೃಷ್ಟಿಯ ನಿಟ್ಟಿನಲ್ಲಿ ಪ್ರಯೋಗಶೀಲರಾಗಿರುವ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ರಾಜಕೀಯ ಪಕ್ಷಗಳ ಪಾಲ್ಗೊಳ್ಳಲಿದ್ದಾರೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News