×
Ad

ಮೇಯೋಹಾಲ್ ಬಳಿಯ ಮೆಟ್ರೋ ಪಿಲ್ಲರ್‌ನಲ್ಲಿ ದೋಷ: ಜನರಲ್ಲಿ ಆತಂಕ

Update: 2019-09-15 23:57 IST

ಬೆಂಗಳೂರು, ಸೆ.15: ಜನರ ಅಚ್ಚುಮೆಚ್ಚಿನ ಸೇವೆಯಾದ ನಮ್ಮ ಮೆಟ್ರೋದಲ್ಲಿ ಒಂದರ ನಂತರ ಒಂದು ಸಮಸ್ಯೆ ಕಾಣಿಸಿಕೊಳ್ಳುತ್ತಿರುವ ಬೆನ್ನಲ್ಲೇ ನಗರದ ಮೇಯೋಹಾಲ್‌ ಬಳಿಯಿರುವ ಮೆಟ್ರೋ ಪಿಲ್ಲರ್‌ನಲ್ಲಿ ದೋಷ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.

ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹಾಡಲು ಬಂದ ನಮ್ಮ ಮೆಟ್ರೋ ಸೇವೆಯಿಂದ ಟ್ರಾಫಿಕ್ ಕಡಿಮೆ ಆಗದೇ ಇದ್ದರೂ, ಜನರಿಗೆ ಸಮಯ ಉಳಿತಾಯ ಅಂತೂ ಆಗಿದೆ. ಜನರ ಅಚ್ಚುಮೆಚ್ಚಿನ ನಮ್ಮ ಮೆಟ್ರೋ ಸೇವೆಯನ್ನು ನಿತ್ಯಾ ಲಕ್ಷಾಂತರ ಜನರು ಪಡೆದುಕೊಳ್ಳುತ್ತಿದ್ದಾರೆ. ಇದರ ನಡುವೆ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದ್ದು, ಆತಂಕ ನಿರ್ಮಾಣ ಮಾಡಿದೆ.

ಮೊದಲ ಬಾರಿಗೆ ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿರುವ ಪಿಲ್ಲರ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ನಂತರ ಇಂದಿರಾನಗರ ಮೆಟ್ರೋ, ಇದೀಗ ಮೇಯೋಹಾಲ್ ಬಳಿಯಲ್ಲಿರುವ ಮೆಟ್ರೋ ಪಿಲ್ಲರ್‌ನಲ್ಲಿ ದೋಷ ಕಾಣಿಸಿಕೊಂಡಿದೆ.

ನೇರಳೆ ಮಾರ್ಗದ ಮೇಯೋ ಹಾಲ್ ಮೆಟ್ರೋ ಪಿಲ್ಲರ್ ನಂ 174 ಬೇರಿಂಗ್ ಪ್ರಾಬ್ಲಂ ಸಮಸ್ಯೆ ಆಗಿದ್ದು, ನೇರಳೆ ಮಾರ್ಗದಲ್ಲಿ ಸಂಚಾರ ಮಾಡುವ ಪ್ರಯಾಣಿಕರಿಗೆ ಮತ್ತೆ ಆತಂಕ ಶುರುವಾಗಿದೆ.

ಬಿಎಂಆರ್‌ಸಿಎಲ್ ಕಳಪೆ ಕಾಮಗಾರಿಯಿಂದ ಪಿಲ್ಲರ್ ಬೇರಿಂಗ್‌ನಲ್ಲಿ ಬಿರುಕು ಕಾಣಿಸಿಕೊಂಡಿದೆಯಾ ಎಂಬ ಅನುಮಾನಗಳು ಶುರುವಾಗಿದೆ. ಇತ್ತ ಪ್ರಯಾಣಿಕರ ಕಣ್ಣು ತಪ್ಪಿಸಿ ಬಿಎಂಆರ್‌ಸಿಎಲ್ ದುರಸ್ತಿ ಕಾರ್ಯ ಮಾಡುತ್ತಿದೆ. ರಾತ್ರೋರಾತ್ರಿ ಪಿಲ್ಲರ್ ದುರಸ್ಥಿ ಮಾಡಿದ್ದು, ಮೆಟ್ರೋ ಮೊದಲ ಹಂತದ ನಿರ್ಮಾಣ ಕಾಮಗಾರಿಯಲ್ಲಿ ಲೋಪ ಉಂಟಾಗಿದೆಯಾ? ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News