ಹುಕ್ಕಾ ಬಾರ್ ಮೇಲೆ ದಾಳಿ: ಆರೋಪಿ ಸೆರೆ

Update: 2019-09-17 17:08 GMT

ಬೆಂಗಳೂರು, ಸೆ. 17: ಕೋರಮಂಗಲದ ಸೋನಿ ವರ್ಲ್ಡ್ ಜಂಕ್ಷನ್ ಬಳಿ ಹುಕ್ಕಾ ಪಾರ್ಲರ್ ನಡೆಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೋಡಿಹಳ್ಳಿಯ ಸುಮನ್ (29) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ಅಂಕಲ್ ಜಾನಿ ಕೆಫೆ ಹೆಸರಿನಲ್ಲಿ ಹುಕ್ಕಾ ಬಾರ್ ತೆಗೆದು ಕಾಲೇಜು ಯುವಕರಿಗೆ, ಐಟಿ-ಬಿಟಿ ಉದ್ಯೋಗಿಗಳಿಗೆ ಹುಕ್ಕಾ ಸೇವನೆಗೆ ಅವಕಾಶ ನೀಡಿ, ಮಾದಕ ವ್ಯಸನಿಗಳಾಗಲು ಪ್ರೇರೇಪಿಸುತ್ತಿದ್ದ ಎನ್ನುವ ಮಾಹಿತಿ ಬೆಳಕಿಜಗೆ ಬಂದಿದೆ. ಬಂಧಿತನಿಂದ ಹುಕ್ಕಾ ಬಾರ್‌ಗೆ ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News