ಚೀನಾ ಓಪನ್ : ಸೈನಾ ಪ್ರಥಮ ಸುತ್ತಿನಲ್ಲೇ ನಿರ್ಗಮನ

Update: 2019-09-18 12:56 GMT

ಚಾಂಗ್ ಝೌ, ಸೆ.18: ಭಾರತದ ಖ್ಯಾತ ಬ್ಯಾಡ್ಮಿಮಂಟನ್ ತಾರೆ ಸೈನಾ ನೆಹ್ವಾಲ್ ಅವರು ಬುಧವಾರ ಚೀನಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನ  ಮೊದಲ ಸುತ್ತಿನ ಪಂದ್ಯದಲ್ಲೇ ಸೋತು ನಿರ್ಗಮಿಸಿದ್ದಾರೆ. 

45 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸೇನಾ ಅವರು ಥಾಯ್ಲೆಂಡ್ ನ ಬುಸಾನನ್ ಒಂಗ್‌ಬಮ್ರಂಗ್‌ಫಾನ್ ಅವರ ಎದುರು ಸೈನಾ 10-21 17-21 ಅಂತರದಲ್ಲಿ ಸೋಲು ಅನುಭವಿಸಿ ಹೊರ ನಡೆದಿದ್ದಾರೆ ಮಾಜಿ ವಿಶ್ವ ನಂಬರ್ ಆಟಗಾರ್ತಿ ಬುಸಾನನ್ ವಿರುದ್ಧ ಸತತ ಎರಡನೇ ಸೋಲು ಅನುಭವಿಸಿರುವ 29 ವರ್ಷದ ಸೈನಾ ಗಾಯದಿಂದ ಚೇತರಿಸಿಕೊಂಡ ನಂತರ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದಾರೆ.

ಸೈನಾ ಅವರು  ಇಂಡೋನೇಷ್ಯಾ ಓಪನ್‌ನಲ್ಲಿ ಗೆಲುವಿನೊಂದಿಗೆ ಈ ವರ್ಷ ಶುಭಾರಂಭ ಮಾಡಿದ್ದರು. ಆದರೆ ಬಳಿಕ ಅವರಿಗೆ ಬಿಡಬ್ಲ್ಯುಎಫ್ ಸರ್ಕ್ಯೂಟ್‌ನಲ್ಲಿ ಇನ್ನೊಂದು ಟೂರ್ನಿಯಲ್ಲಿ ಫೈನಲ್ ತಲುಪಲು ಸಾಧ್ಯವಾಗಿಲ್ಲ.

ಹಾಲಿ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಮೊದೊಲ ಸುತ್ತಿನಲ್ಲಿ ಮಾಜಿ ಒಲಿಂಪಿಕ್ ಚಾಂಪಿಯನ್ ಲಿ ಕ್ಸುಯೆರುಯಿ ಅವರನ್ನು ಎದುರಿಸುವುದರೊಂದಿಗೆ ತನ್ನ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News