ರಾಮ ಹೆಗಡೆ ಕೆರೆಮನೆ

Update: 2019-09-18 15:26 GMT

ವಿಟ್ಲ, ಸೆ. 18: ಯಕ್ಷಗಾನದ ಮಹಾಬಲರೆಂದೇ ಪ್ರಖ್ಯಾತರಾಗಿದ್ದ ಡಾ. ಕೆರೆಮನೆ ಮಹಾಬಲ ಹೆಗಡೆಯವರ ಪುತ್ರ ಪೆÇ್ರ. ರಾಮ ಹೆಗಡೆ ಕೆರೆಮನೆ (67) ಬುಧವಾರ ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಅಳಿಕೆ ಶ್ರೀ ಸತ್ಯ ಸಾಯಿಲೋಕ ಸೇವಾ ವಿದ್ಯಾ ಸಂಸ್ಥೆಯಲ್ಲಿ ಸುಮಾರು 38 ವರ್ಷಗಳ ಕಾಲ ಗಣಿತದ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದ ಇವರು, ಆರ್.ಎಂ. ಹೆಗಡೆ ಎಂದೇ ಖ್ಯಾತಿಯನ್ನು ಗಳಿಸಿದ್ದರು. ಹಿಂದುಸ್ತಾನಿ ಗಾಯಕ, ಗಂಗೂಬಾಯಿ ಹಾನಗಲ್ ಅವರ ಶಿಷ್ಯರಾಗಿದ್ದ ಇವರು, ನಿವೃತ್ತರಾದ ಮೇಲೆ ಯಕ್ಷರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಯಕ್ಷಗಾನದಲ್ಲಿರುವ ಅನೇಕ ಹಳೆಯ ರಾಗಗಳ ಕುರಿತು ಆಳವಾದ ಅಧ್ಯಯನ ಮಾಡಿಟ್ಟುಕೊಂಡು ಆ ಕುರಿತಾದ ಒಂದು ದೀರ್ಘವಾದ ವೀಡಿಯೋ ಕೆಸೆಟ್ ರಿಕಾರ್ಡ್ ಮಾಡಿಡಲು ಎಲ್ಲ ತಯಾರಿ ನಡೆಸಿದ್ದರು. ಕೆಲವು ದಿನಗಳ ಹಿಂದೆ ಮಿದುಳಿನ ರಕ್ತಸ್ರಾವದಿಂದಾಗಿ ಮಣಿಪಾಲದಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದರು. ನೃತ್ಯಗಾರರೂ, ಹಾಡುಗಾರರೂ, ಮೃದಂಗವಾದನಕ್ಕೂ ಸೈಯಾಗಿದ್ದ ಇವರ ಆಕಸ್ಮಿಕ ನಿಧನ ಯಕ್ಷಗಾನದ ಲೋಕಕ್ಕೇ ತುಂಬಲಾರದ ನಷ್ಟವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ