ಏಶ್ಯನ್ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್

Update: 2019-09-18 18:33 GMT

ಹೊಸದಿಲ್ಲಿ, ಸೆ.18: ಭಾರತೀಯ ತಂಡ ಐಟಿಟಿಎಫ್ ಏಶ್ಯನ್ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಶ್ರೇಷ್ಠ ಫಲಿತಾಂಶ ದಾಖಲಿಸಿದೆ. ಹಾಂಕಾಂಗ್ ವಿರುದ್ಧ 3-1 ವರ್ಗೀಕೃತ ಪಂದ್ಯದಲ್ಲಿ ಬುಧವಾರ ಜಯ ದಾಖಲಿಸಿರುವ ಭಾರತ ಈ ಸಾಧನೆ ಮಾಡಿದೆ.

ಭಾರತೀಯ ತಂಡ ಚಾಂಪಿಯನ್ಸ್ ಡಿವಿಜನ್‌ನಲ್ಲಿ ಇರಾನ್ ತಂಡವನ್ನು 3-0 ಅಂತರದಿಂದ ಮಣಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡಿದೆ. ಭಾರತ ಕ್ಲಾಸಿಫಿಕೇಶನ್ ಪಂದ್ಯದಲ್ಲಿ ಶರತ್ ಕಮಲ್‌ರನ್ನು ಮೊದಲಿಗೆ ಕಣಕ್ಕಿಳಿಸಿ ಹೊಸ ಆರಂಭಕ್ಕೆ ಯತ್ನಿಸಿತು. ಕಮಲ್ ಎದುರಾಳಿ ಲಾಮ್ ಸಿಯು ಹಾಂಗ್‌ರನ್ನು 9-11,11-6, 7-11, 11-7, 11-7 ಅಂತರದಿಂದ ಮಣಿಸಿ ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು. ಎರಡನೇ ಪಂದ್ಯದಲ್ಲಿ ಅಂಥೋನಿ ಅಮಲರಾಜ್ ಅವರು ಎನ್‌ಜಿ ಪಾಕ್ ನಾಮ್‌ರನ್ನು 9-11, 11-4, 11-6, 11-7 ಅಂತರದಿಂದ ಮಣಿಸಿದರು. ಮೂರನೇ ಸಿಂಗಲ್ಸ್‌ನಲ್ಲಿ ಜಿ.ಸತ್ಯನ್ ಅವರು ಕ್ವಾನ್ ಮಾನ್ ಹೋರನ್ನು 11-5, 11-13, 11-7, 14-12 ಅಂತರದಿಂದ ಮಣಿಸಿದರು.

ಮೊದಲ ಡಿವಿಜನ್‌ನಲ್ಲಿ ಶರತ್ ಭಾರತಕ್ಕೆ ಮತ್ತೊಮ್ಮೆ ಮೇಲುಗೈ ಒದಗಿಸಿಕೊಟ್ಟಿದ್ದು, ಅಮಿನ್ ಅಹ್ಮದಿನ್‌ರನ್ನು 11-5, 9-11, 11-6, 11-6 ಅಂತರದಿಂದ ಮಣಿಸಿದರು. ಸತ್ಯನ್ ಹಾಗೂ ಅಮಲ್‌ರಾಜ್ ಕೂಡ ಉತ್ತಮ ಪ್ರದರ್ಶನ ನೀಡಿದರು. ಸತ್ಯನ್ ಅವರು ಹುಸೇನ್ ಹೊದಾಯಿ ಅವರನ್ನು 6-11, 11-4, 10-12,11-7, 12-10 ಅಂತರದಿಂದ ಸೋಲಿಸಿದರು.

ಅಮಲರಾಜ್ ಅವರು ನೌಶದ್ ಅಲಮಿಯಾನ್‌ರನ್ನು 18-16, 5-11, 11-9, 6-11, 11-9 ಅಂತರದಿಂದ ಸೋಲಿಸಿದ್ದಾರೆ. ಈಗೆಲುವಿನ ಮೂಲಕ ಭಾರತ ಚಿನ್ನದ ಪದಕ ಜಯಿಸಿತು.

ವೈಯಕ್ತಿಕ ವಿಭಾಗದ ಸ್ಪರ್ಧೆಗಳು ಗುರುವಾರದಿಂದ ಆರಂಭವಾಗಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News