ವೋಟರ್ ಐಡಿ ಪತ್ತೆ ಪ್ರಕರಣ: ವಿಶೇಷ ಸರಕಾರಿ ಅಭಿಯೋಜಕ ಎಸ್.ಬಾಲಕೃಷ್ಣ ನೇಮಕ ರದ್ದು

Update: 2019-09-19 16:34 GMT

ಬೆಂಗಳೂರು, ಸೆ.18: ಅನರ್ಹ ಶಾಸಕ ಮುನಿರತ್ನ ವಿರುದ್ಧ ನಕಲಿ ವೋಟರ್ ಐಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ನೇಮಕ ಮಾಡಲಾಗಿದ್ದ ವಿಶೇಷ ಸರಕಾರಿ ಅಭಿಯೋಜಕ ಎಸ್.ಬಾಲಕೃಷ್ಣ ಅವರ ನೇಮಕವನ್ನು ರದ್ದು ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ 2018ರ ವಿಧಾನಸಭಾ ಚುನಾವಣೆ ವೇಳೆಯಲ್ಲಿ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಫ್ಲಾಟ್‌ನಲ್ಲಿ ಮತದಾರರ ನಕಲಿ ಗುರುತಿನ ಚೀಟಿಗಳು ಪತ್ತೆಯಾಗಿದ್ದವು. ಈ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದರು. ಹೀಗಾಗಿ, 2018ರ ಡಿಸೆಂಬರ್‌ನಲ್ಲಿ ಎಸ್.ಬಾಲಕೃಷ್ಣನ್ ಅವರನ್ನು ಅಂದಿನ ಸರಕಾರ ವಿಶೇಷ ಸರಕಾರಿ ಅಭಿಯೋಜಕರಾಗಿ ನೇಮಿಸಿತ್ತು.

ಈಗ ರಾಜ್ಯ ಸರಕಾರ ಅನರ್ಹ ಶಾಸಕ ಮುನಿರತ್ನ ಅವರ ಮೇಲಿನ ನಕಲಿ ವೋಟರ್ ಐಡಿ ಪ್ರಕರಣದ ವಿಚಾರಣೆಗೆ ಹೊಸದಾಗಿ ಸರಕಾರಿ ಅಭಿಯೋಜಕರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News