ಐಎಂಎ ಬಹುಕೋಟಿ ವಂಚನೆ ಪ್ರಕರಣ: 8 ಆರೋಪಿಗಳ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Update: 2019-09-19 17:04 GMT

ಬೆಂಗಳೂರು, ಸೆ.19: ಐಎಂಎ(ಐ ಮಾನಿಟರಿ ಅಡ್ವೈಸರಿ) ಬಹುಕೋಟಿ ವಂಚನೆ ಪ್ರಕರಣದಲ್ಲಿ ಜಾಮೀನು ಕೋರಿ ಎಂಟು ಆರೋಪಿಗಳು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ವಿಚಾರಣೆಯನ್ನು ಪೂರ್ಣಗೊಳಿಸಿ, ಆದೇಶವನ್ನು ಕಾಯ್ದಿರಿಸಿತು.

ಈ ಕುರಿತು ಜಾಮೀನು ಕೋರಿ ಮೌಲವಿ ಮುಹಮದ್ ಹನೀಫ್ ಅಫ್ಸರ್ ಅಝೀಝ್, ರವಿ ನರಾಳೆ, ಸನಾವುಲ್ಲಾ, ಸೈಯದ್ ಮುಜಾಹಿದ್, ಮುಹಮದ್ ಅಕ್ಬರ್ ಶರೀಫ್, ಎ.ನಿಜಾಮುದ್ದೀನ್ ಎ.ಅಫ್ಸರ್ ಪಾಷ ಮತ್ತು ದಾದಾಪೀರ್ ಅಸಾದುಲ್ಲಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು.

ಆರೋಪಿಗಳ ಪರ ಹಿರಿಯ ವಕೀಲರಾದ ಬಿ.ವಿ.ಆಚಾರ್ಯ, ಸಿ.ವಿ.ನಾಗೇಶ್, ಹಷ್ಮತ್ ಪಾಷ, ಎಂ.ಎಸ್.ಶ್ಯಾಮಸುಂದರ್ ವಾದ ಮಂಡಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀವು ಆದೇಶವನ್ನು ಕಾಯ್ದಿರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News