ವಿಶ್ವ ಕುಸ್ತಿ ಚಾಂಪಿಯನ್‌ಶಿಪ್: ಮೊದಲ ಸುತ್ತಿನಲ್ಲಿ ಎಡವಿದ ಸುಶೀಲ್ ಕುಮಾರ್

Update: 2019-09-20 09:16 GMT

ನೂರ್‌ಸುಲ್ತಾನ್(ಕಝಖ್‌ಸ್ತಾನ), ಸೆ.20: ಎಂಟು ವರ್ಷಗಳ ಬಳಿಕ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ಗೆ ವಾಪಸಾಗಿರುವ ಭಾರತದ ಹಿರಿಯ ಕುಸ್ತಿಪಟು ಸುಶೀಲ್‌ಕುಮಾರ್ ಶುಕ್ರವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲೇ ಸೋಲನುಭವಿಸಿ ನಿರಾಸೆಗೊಳಿಸಿದರು.
ಸುಶೀಲ್‌ಕುಮಾರ್ 74 ಕೆಜಿ ಕ್ವಾಲಿಫಿಕೇಶನ್ ಪಂದ್ಯದಲ್ಲಿ ಅಝರ್‌ಬೈಜಾನ್‌ನ ಖಡ್‌ಝಿಂರಾದ್ ಗಾಡ್ಝಿಯೆವ್ ವಿರುದ್ಧ ಒಂದು ಹಂತದಲ್ಲಿ ತನ್ನೆಲ್ಲಾ ಅನುಭವ ಬಳಸಿಕೊಂಡು 9-4 ಮುನ್ನಡೆ ಸಾಧಿಸಿದ್ದರು. ಆದರೆ, ಸತತ 7 ಅಂಕವನ್ನು ಕಳೆದುಕೊಂಡು ಸೋಲನುಭವಿಸಿದರು.
ಒಂದು ವೇಳೆ ಗಾಡ್ಝಿಯೆವ್ ಫೈನಲ್‌ಗೆ ತಲುಪಿದರೆ ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿರುವ ಸುಶೀಲ್ ಕಂಚಿನ ಪದಕಕ್ಕಾಗಿ ಹೋರಾಡುವ ಅವಕಾಶ ಪಡೆಯಲಿದ್ದಾರೆ.

ಸುಶೀಲ್ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಜಯಿಸಿದ ಭಾರತದ ಏಕೈಕ ಕುಸ್ತಿಪಟು. 2010ರಲ್ಲಿ ಮಾಸ್ಕೋದಲ್ಲಿ ಈ ಸಾಧನೆ ಮಾಡಿದ್ದರು. ಒಲಿಂಪಿಕ್ಸ್‌ಯೇತರ 70 ಕೆಜಿ ವಿಭಾಗದಲ್ಲಿ ಕರಣ್ ಉಝ್ಬೇಕಿಸ್ತಾನದ ಇಕ್ತಿಯೊರ್ ನವ್ರರೊವ್‌ವಿರುದ್ಧ 0-7 ಅಂತರದಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News