ಐಎಂಎ ವಂಚನೆ ಪ್ರಕರಣ: ಸೆ.24ರವರೆಗೆ ಮನ್ಸೂರ್‌ ಖಾನ್ ಸಿಬಿಐ ವಶಕ್ಕೆ

Update: 2019-09-20 15:53 GMT

ಬೆಂಗಳೂರು, ಸೆ.20: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮನ್ಸೂರ್‌ ಖಾನ್‌ನನ್ನು ಸಿಟಿ ಸಿವಿಲ್ ಸಿಬಿಐ ವಿಶೇಷ ನ್ಯಾಯಾಲಯ ಸೆ.24ರವರೆಗೆ ಸಿಬಿಐ ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.

ಪ್ರಮುಖ ಆರೋಪಿ ಮನ್ಸೂರ್‌ಖಾನ್ ಹಾಗೂ ಮತ್ತೊಬ್ಬ ಆರೋಪಿ ನವೀದ್ ಎಂಬಾತನನ್ನು ನ್ಯಾಯಾಲಯ ಸಿಬಿಐ ವಶಕ್ಕೆ ನೀಡಿದೆ. ಇನ್ನುಳಿದ ನಿಜಾಮುದ್ದೀನ್ ಮತ್ತು ನಾಸೀರ್ ಹುಸೇನ್ ಅ.5ರವರೆಗೆ ನ್ಯಾಯಾಂಗ ಬಂಧನದ ವಶಕ್ಕೆ ನೀಡಿ ಆದೇಶ ನೀಡಿತು.

ಆರೋಪಿಗಳ ಮತ್ತಷ್ಟು ವಿಚಾರಣೆ ಅಗತ್ಯವಿದೆ. ವಂಚನೆ ಮತ್ತು ಹಣ ನೀಡಿರುವ ಬಗ್ಗೆ ಹಲವು ಮಹತ್ವದ ದಾಖಲೆಗಳನ್ನು ಕಲೆ ಹಾಕಬೇಕಿದೆ. ಹೀಗಾಗಿ, ಹೆಚ್ಚಿನ ವಿಚಾರಣೆಗೆ ಸಲುವಾಗಿ ಸಿಬಿಐ ವಶಕ್ಕೆ ನೀಡಬೇಕೆಂದು ಸಿಬಿಐ ಪರ ವಕೀಲರು ನ್ಯಾಯಾಲಯದಲ್ಲಿ ಮನವಿ ಮಾಡಿದರು. ಸಿಬಿಐ ಪರ ವಕೀಲರ ಮನವಿಯನ್ನು ಪುರಸ್ಕರಿಸಿದ ಕೋರ್ಟ್ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್‌ ಖಾನ್ ಮತ್ತು ಮತ್ತೊಬ್ಬ ಆರೋಪಿ ನವೀದ್ ಎಂಬಾತನನ್ನು ಸಿಬಿಐ ವಶಕ್ಕೆ ನೀಡಿದೆ. ಹೀಗಾಗಿ, ಸೆ.24ರವರೆಗೆ ಇಬ್ಬರು ಆರೋಪಿಗಳು ಸಿಬಿಐ ವಶದಲ್ಲಿ ಇರಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News