ಭಾಷಾ ವೈವಿಧ್ಯವನ್ನು ಸಂಭ್ರಮಿಸೋಣ

Update: 2019-09-21 13:10 GMT

ರಾಷ್ಟ್ರಭಾಷೆಯಾಗಿ ಹಿಂದಿಗೆ ಇರುವ ಪ್ರಾಮುಖ್ಯ ತೆಯ ಕುರಿತು ಕೇಂದ್ರ ಗೃಹ ಸಚಿವರು ಸಾಕಷ್ಟು ಮಾತನಾಡಿದ್ದಾರೆ. ಹಿಂದಿ ಭಾಷೆಯ ಪ್ರಚಾರದಿಂದ ರಾಷ್ಟ್ರೀಯ ಏಕತೆಯನ್ನು ಬಲಪಡಿಸಬಹುದಾಗಿದೆಯೆಂದು ಅವರು ಹೇಳುತ್ತಿದ್ದಾರೆ. ಉತ್ತರ ಭಾರತೀಯ ಬ್ರಾಹ್ಮಣರು ಅಥವಾ ಬನಿಯಾಗಳ ನೇತೃತ್ವದಲ್ಲಿ ಆರ್ಯ ಜನಾಂಗದ ಪ್ರಾಬಲ್ಯದ ಭಾರತವನ್ನು ನಿರ್ಮಿಸುವ ದೂರದೃಷ್ಟಿಯನ್ನು ಹೊಂದಿರುವ ಆರೆಸ್ಸೆಸ್‌ನಿಂದ ಈ ಚಿಂತನೆಗಳು ಮೂಡಿ ಬಂದಿದೆಯೆಂದು ಹೆಚ್ಚಿನವರಿಗೆ ತಿಳಿದಿಲ್ಲ. ನೀವು ಯಾವ ಬಟ್ಟೆಗಳನ್ನು ಧರಿಸಬೇಕೆನ್ನುವುದು ಸೇರಿದಂತೆ ಪ್ರತಿಯೊಂದು ವಿಷಯದಲ್ಲಿ ಏಕರೂಪತೆಯನ್ನು ಕಾಣಬಯಸುವ ಅವರಿಗೆ ವೈವಿಧ್ಯತೆಯೆಂಬುದು ಭೀತಿಯನ್ನು ಹುಟ್ಟಿಸುತ್ತದೆ. ನಾನು ಹಿಂದಿ ಭಾಷಾ ಹೃದಯದ ನಾಡಿನಲ್ಲಿ ನೆಲೆಸಿದವನು. ಮೂಲತಃ ನಾನು ಉತ್ತರಾಖಂಡ ಪ್ರಾಂತ ದವನಾಗಿದ್ದೇನೆ. ಅಲ್ಲಿ ಜನರು ವಿವಿಧ ಭಾಷೆಗಳನ್ನು ಆಡುತ್ತಾರೆ. ಅತ್ಯಂತ ಪ್ರಭಾವಶಾಲಿಯಾದ ಗರ್ವಾಲಿ ಸಾಹಿತ್ಯವನ್ನು ಕಂಡು ನನಗೆ ಅಚ್ಚರಿಯಾಗುತ್ತಿತ್ತು. ಈಗಾಗಲೇ ಗರ್ವಾಲಿ ಹಾಗೂ ಕುಮಾವೊನಿ ಭಾಷೆಗಳಲ್ಲಿ ಸಾಕಷ್ಟು ಸಾಹಿತ್ಯಿಕ ಕೆಲಸಗಳಾಗಿವೆ. ನೀವು ಅವುಗಳನ್ನು ಕೇವಲ ಉಪಭಾಷೆಗಳೆಂದು ಕಡೆಗಣಿಸುವಂತಿಲ್ಲ. ನೀವು ಉತ್ತರಪ್ರದೇಶಕ್ಕೆ ಹೋಗಿ, ಅಲ್ಲಿ ಬುಂದೇಲ್‌ಖಂಡಿ ಭಾಷೆಯ ಮಾಧುರ್ಯ, ಅವಧಿ ಭಾಷೆಯ ಸೌಂದರ್ಯ, ಮೀರತ್ ಹಾಗೂ ಪಶ್ಚಿಮ ಉತ್ತರಪ್ರದೇಶದ ದಂಡಾ ಮಾರ್, ಖಾರಿ ಬೋಲಿ ಭಾಷೆಯ ಸೊಗಸನ್ನು ಮತ್ತು ಉತ್ತರಪ್ರದೇಶ ಹಾಗೂ ಬಿಹಾರದ ವಿಶಾಲ ಪ್ರದೇಶಗಳನ್ನು ವ್ಯಾಪಿಸಿರುವ ಭೋಜ್‌ಪುರಿ ಭಾಷೆಯ ಪ್ರಭಾವವನ್ನು ನೀವು ಕಾಣುವಿರಿ. ಭೋಜ್‌ಪುರಿ ಭಾಷೆಯ ಸೊಗಡನ್ನು ಈಗ ಅನಿವಾಸಿ ಭಾರತೀಯರೂ ಪಸರಿಸುತ್ತಿದ್ದಾರೆ.

 ಭಾರತದಲ್ಲಿ ಭಾಷೆ ಎಂಬುದು ಆಗಾಗ್ಗೆ ವಿವಾದಕ್ಕೀ ಡಾಗುತ್ತಲೇ ಇರುತ್ತದೆ. ಭಾಷೆಗಳು, ಆಹಾರ ಅಭ್ಯಾಸಗಳು ಹಾಗೂ ಜೀವನಶೈಲಿಯನ್ನು ಒಳಗೊಂಡ ನಮ್ಮ ಸಂಸ್ಕೃತಿ ಯ ವೈವಿಧ್ಯತೆಯನ್ನು ನಾವು ಒಪ್ಪಿಕೊಳ್ಳಬೇಕಾದ ಅಗತ್ಯ ವಿದೆ. ಇವೆಲ್ಲವೂ ನಮ್ಮ ಭೌಗೋಳಿಕ ಪ್ರದೇಶಗಳಿಗೆ ಅನುಗುಣವಾಗಿ ಅಭಿವೃದ್ಧಿ ಹೊಂದುತ್ತವೆ.

ನಮ್ಮ ಸಂವಿಧಾನದ ನಿರ್ಮಾತೃರು ದೂರದೃಷ್ಟಿಯನ್ನು ಹೊಂದಿದವರಾಗಿದ್ದರು ಹಾಗೂ ಅವರು ಈ ವಿಚಾರವನ್ನು ಚೆನ್ನಾಗಿ ಅರಿತುಕೊಂಡಿದ್ದರು. ಸ್ವಾತಂತ್ರ ದೊರೆತ ಕೂಡಲೇ ಪಾಕಿಸ್ತಾನದ ಮಾಡಿದ ತಪ್ಪಿನಿಂದ ನಾವು ಪಾಠ ಕಲಿಯಬೇಕಾಗಿದೆ. ಆಗಿನ ಗವರ್ನರ್ ಜನರಲ್ ಮುಹಮ್ಮದ್ ಅಲಿ ಜಿನ್ನಾ ಢಾಕಾಗೆ ಭೇಟಿ ನೀಡಿದ್ದರು ಹಾಗೂ ಢಾಕಾ ವಿವಿಯ ಆವರಣದಲ್ಲಿ ನಡೆದ ಬೃಹತ್ ಸಭೆಯನ್ನುದ್ದೇಶಿಸಿ ಅವರು ಭಾಷಣ ಮಾಡಲಿದ್ದರು. ಮೂರು ಲಕ್ಷಕ್ಕೂ ಅಧಿಕ ಮಂದಿ ಅವರ ಭಾಷಣವನ್ನು ಆಲಿಸಲು ಕಾದುನಿಂತಿದ್ದರು. ಆಗಷ್ಟೇ ಪಾಕ್ ರಚನೆಯಾಗಿತ್ತು ಮತ್ತು ಪೂರ್ವ ಬಂಗಾಳ (ಈಗಿನ ಬಾಂಗ್ಲಾ ಆಗ ಪಾಕಿಸ್ತಾನಕ್ಕೆ ಸೇರಿತ್ತು)ದಲ್ಲಿ ಮುಸ್ಲಿಮ್ ಸಾಮುದಾಯಿಕ ಭಾವನೆಗಳು ಉತ್ತುಂಗದಲ್ಲಿದ್ದವು. 1948ರ ಮಾರ್ಚ್ 21ರಂದು ಢಾಕಾ ವಿವಿ ಆವರಣದಲ್ಲಿ ಜಿನ್ನಾ ಅವರು ಹೆಮ್ಮೆಯಿಂದ ಹೀಗೆ ಘೋಷಿಸಿದರು. ‘‘ಒಂದು ರಾಷ್ಟ್ರ ಭಾಷೆಯಿಲ್ಲದೆ ಯಾವುದೇ ದೇಶವು ಬಲವಾದ ಒಗ್ಗಟ್ಟಿನಿಂದಿರಲು ಹಾಗೂ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ’’ ಎಂದು ಜಿನ್ನಾ ಹೆಮ್ಮೆ ಯಿಂದ ಹೇಳಿದ್ದರು. ಪೂರ್ವ ಪಾಕಿಸ್ತಾನದಲ್ಲಿ ಭಾಷಾ ಪ್ರೇಮವು, ಧರ್ಮಗಳ ಅಂತರವನ್ನು ಮೀರುವಷ್ಟು ಪ್ರಭಾವಶಾಲಿಯಾಗಿತ್ತು. ಅಲ್ಲಿ ಜನರು ಬಂಗಾಳಿ ಭಾಷೆ ಯನ್ನು ಮಾತನಾಡು ತ್ತಾರೆ. ಬಂಗಾಳಿ ಭಾಷೆಗೆ ಬಂಗಾಳಿ ಜನರೇ ವಾರಸುದಾರರಾಗಿದ್ದರು. ಜಿನ್ನಾ ಭಾಷಣ ಮಾಡುತ್ತಿದ್ದಂತೆಯೇ ಭಾರೀ ಸಂಖ್ಯೆ ಯಲ್ಲಿ ಅಲ್ಲಿ ನೆರೆದಿದ್ದ ಜನರು ಕೋಲಾಹಲ ವೆಬ್ಬಿಸಿದರು ಹಾಗೂ ಜನರು ಚಪ್ಪಲಿಗಳನ್ನು ಎಸೆಯ ತೊಡಗಿದರು. ಢಾಕಾ ಹಾಗೂ ಪೂರ್ವ ಪಾಕಿಸ್ತಾನದ ಇತರ ಭಾಗಗಳಲ್ಲಿ ಅಶಾಂತಿ ತಲೆದೋರಿತು. 1948ರಲ್ಲಿ ಜಿನ್ನಾ ಅವರು ನಿಧನ ರಾದ ಬಳಿಕ ಈ ಭಾಷಾ ವಿವಾದವನ್ನು ನಿಭಾಯಿಸುವ ಹೊರೆ ಪಾಕಿಸ್ತಾನದಿಂದ ಆಮದಾಗಿದ್ದ ನಾಯಕರ ಮೇಲೆ ಬಿದ್ದಿತು. ಈ ನಾಯಕರು ಮುಖ್ಯವಾಗಿ ಮೂಲತಃ ಉರ್ದು ಭಾಷಿಕ ರಾಗಿದ್ದರು. ಆದಾಗ್ಯೂ ಪಶ್ಚಿಮ ಪಾಕಿಸ್ತಾನದಲ್ಲಿ ಉದ್ವಿಗ್ನತೆ ಶಮನಗೊಳ್ಳಲಿಲ್ಲ. ‘ರಾಷ್ಟ್ರೀಯ ಏಕತೆ’ಯ ಹೆಸರಿನಲ್ಲಿ ಹೆಚ್ಚೆಚ್ಚು ನಿರ್ಬಂಧಗಳು ಹೇರಲಾಯಿತು ಮತ್ತು ಸಾಂಸ್ಕೃತಿಕ ತಡೆಗೋಡೆಗಳು ಸೃಷ್ಟಿಯಾದವು. ಅಂತಿಮವಾಗಿ, ಸ್ವಾತಂತ್ರ ದೊರೆತ 24 ವರ್ಷಗಳ ಬಳಿಕ ಪಾಕಿಸ್ತಾನವು ಕೊನೆಗೂ ವಿಭಜನೆಗೊಂಡು ಬಾಂಗ್ಲಾದೇಶದ ಉದಯವನ್ನು ಅದು ಒಪ್ಪಿಕೊಳ್ಳಬೇಕಾಯಿತು.

ಭಾರತದಲ್ಲಿ ಅದರಲ್ಲಿಯೂ ನಿರ್ದಿಷ್ಟವಾಗಿ ದಕ್ಷಿಣದ ರಾಜ್ಯಗಳಲ್ಲಿ ಹಿಂದಿ ಹೇರಿಕೆಯ ವಿರುದ್ಧ ಸಾಕಷ್ಟು ಪ್ರತಿ ಭಟನೆಗಳು ನಡೆದಿವೆ. ಪೆರಿಯಾರ್ ಅವರು ಹಿಂದಿ ಹೇರಿಕೆ ಯ ವಿರುದ್ಧ ಬಹಿರಂಗವಾಗಿ ವಿರೋಧಿಸಿದ್ದರು ಹಾಗೂ ಆ ಬಗ್ಗೆ ಅವರ ದೃಷ್ಟಿಕೋನವು ಅತ್ಯಂತ ಸರಳವಾಗಿತ್ತು. ತಮಿಳು ಒಂದು ಮಹಾನ್ ಭಾಷೆಯಾಗಿದೆ ಹಾಗೂ ತಮಿಳುನಾಡು ರಾಜ್ಯವು ತಮ್ಮ ತಮಿಳು-ದ್ರಾವಿಡ ಅಸ್ಮಿತೆಯ ಬಗ್ಗೆ ಅಪಾರವಾದ ಹೆಮ್ಮೆಯನ್ನು ಹೊಂದಿತ್ತು ಹಾಗೂ ತಮಿಳು ಭಾಷೆಯ ಸಾಹಿತ್ಯ ಶ್ರೀಮಂತಿಕೆ ಹಾಗೂ ಸಾಮರ್ಥ್ಯಕ್ಕೆ ಸರಿಸಾಟಿಯಲ್ಲದ ಹಿಂದಿ ಭಾಷೆಯನ್ನು ಓದುವುದು ಅವರಿಗೆ ಇಷ್ಟವಾಗಲಿಲ್ಲ.

 ಭಾಷೆಗಳನ್ನು ಕಲಿಯುವುದರಲ್ಲಿ ಯಾವುದೇ ತಪ್ಪಿಲ್ಲ ಮತ್ತು ಹಿಂದಿ ಭಾಷೆಯು ಟಿವಿ ವಾಹಿನಿಗಳು, ಸುದ್ದಿ ಕಾರ್ಯಕ್ರಮಗಳು ಹಾಗೂ ರಿಯಾಲಿಟಿ ಶೋಗಳ ಮೂಲಕ ಈಗಾಗಲೇ ನಮ್ಮ ಮನೆಬಾಗಿಲಿಗೆ ತಲುಪಿದೆ. ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ, ಶ್ರೀಲಂಕಾಗಳಲ್ಲಿಯೂ ಸಾಮಾನ್ಯ ಜನರು ಕೂಡಾ ಅನ್ಯ ಭಾಷೆಯ ಜನರೊಂದಿಗೆ ಸಂವಹನ ನಡೆಸಲು ಹರಕುಮುರುಕು ಹಿಂದಿಯಲ್ಲಿ ಮಾತನಾಡಬಲ್ಲರು. ಹೀಗಾಗಿ ಹಿಂದಿ ಭಾಷೆಯನ್ನು ಕಡ್ಡಾಯವಾಗಿ ಹೇರುವ ಮೂಲಕ ಕೇಂದ್ರ ಸರಕಾರಕ್ಕೆ ವಿವಾದವನ್ನು ಹುಟ್ಟುಹಾಕುವ ಅಗತ್ಯವಿರಲಿಲ್ಲ. ಎಲ್ಲೆಡೆ ಈಗ ಹಿಂದಿ ಭಾಷೆಯನ್ನು ಪ್ರೋತ್ಸಾಹಿಸಲಾಗುತ್ತಿದೆ ಹಾಗೂ ಜನತೆ ಹಿಂದಿ ದಿವಸ್ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಸರಕಾರದಿಂದ ನೇಮಕ ಗೊಂಡ ಅಧಿಕಾರಿಗಳು ಹಿಂದಿ ಭಾಷೆ ಕುರಿತ ಸರಕಾರಿ ಯೋಜನೆ ಗಳನ್ನು ಈಶಾನ್ಯ ಭಾರತ, ಗೋವಾ ಹಾಗೂ ದಕ್ಷಿಣದ ರಾಜ್ಯಗಳ ರಾಜಧಾನಿಗಳಿಗೆ ತರುತ್ತಿದ್ದಾರೆ. ಕೇವಲ ಹಿಂದಿ ಪ್ರಚಾರ ಸಭೆಯನ್ನು ಏರ್ಪಡಿಸಿ, ಅದರ ಸುದ್ದಿಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸುವುದಷ್ಟೇ ಅವರ ಕೆಲಸವಾಗಿದೆ. ಹೀಗೆ ಭಾಷಾ ದುರಭಿಮಾನವನ್ನು ಸೃಷ್ಟಿಸುವ ಇಂತಹ ವ್ಯಕ್ತಿಗಳಿಗೆ ಹಿಂದಿ ಭಾಷೆಯಿಂದಾಗಿ ಸಾಕಷ್ಟು ಕೆಲಸಗಳು ದೊರೆತಿವೆ.

ಆದರೆ, ನಾನು ಇಲ್ಲಿ ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಲು ಬಯಸಿದ್ದೇನೆ. ಹಿಂದಿಯ ಬಗ್ಗೆ ನಮ್ಮ ನಾಯಕರು ಗಾಢವಾಗಿ ಚಿಂತಿಸುತ್ತಿದ್ದಾರೆಂದು ಇದರ ಅರ್ಥವಲ್ಲ. ಅವರಿಗೆ ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಕಾಯುವುದು ಮುಖ್ಯವಾಗಿದೆ. ಹಿಂದಿ ಹೃದಯಭಾಗದ ಹೊರಗಿರುವ ಪ್ರದೇಶಗಳಲ್ಲಿಯೂ ಅಮಿತಾಭ್ ಬಚ್ಚನ್ ಅವರ ಜನಪ್ರಿಯ ಶೋ ಕೌನ್ ಬನೇಗಾ ಕರೋಡ್‌ಪತಿ ಎಷ್ಟು ಜನಪ್ರಿಯವಾಗಿದೆಯೆಂದು ಅವರಿಗೆ ತಿಳಿದಿರಲಿಕ್ಕಿಲ್ಲ.

ಸದ್ಯಕ್ಕೆ ಇಲ್ಲಿರುವ ಸಮಸ್ಯೆಯೇನೆಂದರೆ, ಸರಕಾರಕ್ಕೆ ಜನರಲ್ಲಿ ತನ್ನ ಬಗ್ಗೆ ಆತ್ಮವಿಶ್ವಾಸವನ್ನು ಮೂಡಿಸಲು ಸಾಧ್ಯವಾಗದೆ ಇರುವುದು. ಆರ್ಥಿಕ ಹಿಂಜರಿತ ಪ್ರಪಾತ ದೆಡೆಗೆ ನಾವು ಸಾಗುತ್ತಿದ್ದು, ಆರ್ಥಿಕತೆಯನ್ನು ಅದು ಸರಿ ಪಡಿಸಬೇಕಾಗಿದೆ. ದುರದೃಷ್ಟವಶಾತ್ ಸರಕಾರವು ಆ ಬಗ್ಗೆ ಯೋಚಿಸದೆ ಈಗಲೂ ಚುನಾವಣೆಯ ಗುಂಗಿನಲ್ಲೇ ಇದೆ.

ಏನೇ ಇದ್ದರೂ, ಈ ಬಗ್ಗೆ ಹೆಚ್ಚು ತಲೆಬಿಸಿ ಮಾಡಿಕೊಳ್ಳ ಬೇಕಾದಂತಹ ಅಗತ್ಯವಿಲ್ಲ. ಈ ವಿಷಯಗಳು ಪ್ರತಿಯೊಂದು ಮಧ್ಯಂತರದಲ್ಲಿ ಬರುತ್ತಲೇ ಇರುತ್ತವೆ. ಒಮ್ಮೆಮ್ಮೆ ಅವು ವೇಗದಗತಿಯಲ್ಲಿ ಮುಂದೆ ಬರುತ್ತವೆ. ಸಮಗ್ರ ಭಾರತವು ಪ್ರಗತಿಯನ್ನು ಸಾಧಿಸಿದೆ ಹಾಗೂ ಏಕತೆಯನ್ನು ಕಾಯ್ದುಕೊಂಡಿದೆ ಹಾಗೂ ಜೊತೆಯಾಗಿ ಬಾಳಲು ನಿರ್ಧರಿಸಿದೆಯೆಂಬುದನ್ನು ಮಾತ್ರ ನಾವು ಸ್ಪಷ್ಟವಾಗಿ ಹೇಳಬಹುದಾಗಿದೆ.

 ನಾವು ಏಕತೆಯಿಂದ ಇದ್ದೇವೆ ಯಾಕೆಂದರೆ ನಾವು ಬೃಹತ್ ಸೈನ್ಯವನ್ನು ಹೊಂದಿದ್ದೇವೆ ಹಾಗೂ ಅವರು ಎಲ್ಲವನ್ನೂ ದಂಡಪ್ರಯೋಗಿಸಿ ನಿಯಂತ್ರಿಸಬಲ್ಲರು ಎಂದು ಯಾರಾದರೂ ಭಾವಿಸಿದಲ್ಲಿ ಅವರು ತಪ್ಪಾಗಿ ಭಾವಿಸಿದ್ದಾರೆಂದು ಹೇಳಬಹುದಾಗಿದೆ.

 ದೇಶದ ಏಕತೆ ಹಾಗೂ ಸಮಗ್ರತೆಯನ್ನು ಬಲಪಡಿಸು ವುದು ನಮ್ಮ ಕರ್ತವ್ಯವಾಗಿದೆ ಹಾಗೂ ನಮ್ಮ ಅಗಾಧವಾದ ವೈವಿಧ್ಯತೆಯೇ ನಮ್ಮ ಶಕ್ತಿಯಾಗಿದೆ ಎಂಬುದನ್ನು ಒಪ್ಪಿಕೊಳ್ಳ ಬೇಕಾಗಿದೆ ಮತ್ತು ದೇಶಕ್ಕೆ ಹಾನಿಕರವಾದ ಏಕರೂಪದ ಸಂಸ್ಕೃತಿಯನ್ನು ಹೇರುವ ಕಾರ್ಯಸೂಚಿಯನ್ನು ಕೈಬಿಡಬೇಕಾಗಿದೆ.

ಕೃಪೆ: countercurrents.org

Writer - ವಿದ್ಯಾಭೂಷಣ್ ರಾವತ್

contributor

Editor - ವಿದ್ಯಾಭೂಷಣ್ ರಾವತ್

contributor

Similar News