ದೇಶದ ಬಹುತ್ವವನ್ನು ಭಾವೈಕ್ಯತೆ ಮೂಲಕ ಉಳಿಸಿಕೊಳ್ಳೋಣ: ಬೆಂಗಳೂರು ವಿವಿ ಕುಲಪತಿ ಪ್ರೊ.ಜಾಫೆಟ್

Update: 2019-09-21 14:55 GMT

ಬೆಂಗಳೂರು, ಸೆ.21: ಭಾರತವು ಬಹುತ್ವವನ್ನು ಹೊಂದಿದ ವಿಶಿಷ್ಟ ದೇಶವಾಗಿದ್ದು, ಈ ಬಹುತ್ವವನ್ನು ನಾವು ಭಾವೈಕ್ಯತೆಯ ಮೂಲಕ ಉಳಿಸಿಕೊಳ್ಳಬೇಕಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಾಫೆಟ್ ತಿಳಿಸಿದ್ದಾರೆ. 

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ, ಯುವಸಬಲಿಕರಣ ಮತು ಕ್ರೀಡಾ ಇಲಾಖೆಯ ರಾಷ್ಟ್ರೀಯ ಸೇವಾ ಯೋಜನಾ ಕೋಶ ಆಯೋಜಿಸಿದ್ದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಜ್ಯ ಎನ್ನೆಸ್ಸೆಸ್ ಅಧಿಕಾರಿ ಡಾ.ಗಣನಾಥ ಶೆಟ್ಟಿ ಎಕ್ಕರ್ ಮಾತನಾಡಿ, ಬಹುತ್ವದ ಮಹತ್ವವನ್ನು ತಿಳಿಸುತ್ತಾ ಒಗ್ಗಟ್ಟಿನಿಂದ ಎನ್ನೆಸ್ಸೆಸ್ ಕಾರ್ಯಕ್ರಮಗಳನ್ನು ಮಾಡಿದರೆ ಮಾತ್ರ ಸದೃಢ ಭಾರತವನ್ನು ನಿರ್ಮಿಸಲು ಸಾಧ್ಯ. ಯುವಜನತೆಗೆ ಭಾವೈಕ್ಯತೆಯ ಕುರಿತು ಅರಿವು ಮೂಡಿಸುವುದು ಶಾಲಾ-ಕಾಲೇಜು ಹಾಗೂ ಸಂಘ, ಸಂಸ್ಥೆಗಳ ಕರ್ತವ್ಯವೆಂದು ಅವರು ಹೇಳಿದರು.

ಪ್ರಾದೇಶಿಕ ನಿರ್ದೇಶಕರಾದ ಖಾದ್ರಿ ನರಸಿಂಹಯ್ಯ, ಪ್ರಾಂಶುಪಾಲೆ ಡಾ. ಅರ್ಪಣಾ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಎನ್ನೆಸ್ಸೆಸ್ ಕೋಶದ ಸಂಯೋಜನಾಧಿಕಾರಿ ಡಾ.ಗೋವಿಂದಗೌಡ ನೇತೃತ್ವದಲ್ಲಿ 8 ದಿನಗಳ ರಾಷ್ಟ್ರೀಯ ಭಾವೈಕ್ಯತಾ ಶಿಬಿರವನ್ನು ಆಯೋಜಿಸಿದ್ದು, ಈ ಶಿಬಿರದಲ್ಲಿ ದೇಶದ 32ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳು ಹಾಗೂ 13 ರಾಜ್ಯಗಳಿಂದ ಸುಮಾರು 150ಕ್ಕೂ ಹೆಚ್ಚು ಎನ್ನೆಸ್ಸೆಸ್ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News