ತಾಯಿ-ಮಕ್ಕಳ ಆರೈಕೆಯ ‘ಪಂಚು’ ಯೋಜನೆಗೆ ಚಾಲನೆ

Update: 2019-09-21 16:15 GMT

ಬೆಂಗಳೂರು, ಸೆ. 21: ಗ್ರಾಮೀಣ ಪ್ರದೇಶ ತಾಯಿ ಮತ್ತು ಮಕ್ಕಳ ಆರೈಕೆಯ ಪ್ರಾಯೋಗಿಕ ‘ಪಂಚು’ ಯೋಜನೆಗೆ ಆರೋಗ್ಯ ಸೇವಾ ಪೂರೈಕೆದಾರರಿಗೆ ತರಬೇತಿ ನೀಡುವ ರಾಜ್ಯ ಸರಕಾರದ ಖಾಸಗಿ ಸಹಭಾಗಿತ್ವ ಯೋಜನೆಗೆ ಪ್ರಸೂತಿ ತಜ್ಞೆ ಡಾ.ಹೇಮಾ ದಿವಾಕರ್ ಚಾಲನೆ ನೀಡಿದ್ದಾರೆ.

ಶನಿವಾರ ಇಲ್ಲಿನ ಸಂತೇಮಾರನಹಳ್ಳಿಯಲ್ಲಿ ಸರಕಾರದ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಆಸ್ಪತ್ರೆಗಳು ಮತ್ತು ತಂತ್ರಜ್ಞಾನ ಸಂಸ್ಥೆಗಳು ತಜ್ಞರೊಂದಿಗೆ ಗ್ರಾಮೀಣ ಪ್ರದೇಶದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಈ ಯೋಜನೆ ಸಹಕಾರಿ ಎಂದರು.

ಸರಕಾರದ ಸಹಯೋಗದಲ್ಲಿ ಕರ್ನಾಟಕದಾದ್ಯಂತ ಖಾಸಗಿ ಹಾಗೂ ಸಾರ್ವಜನಿಕ ಆರೋಗ್ಯ ಸೇವಾ ವ್ಯವಸ್ಥೆಗಳಲ್ಲಿ ಈ ಮಾದರಿಯನ್ನು ವಿಸ್ತರಿಸಲು ಉದ್ದೇಶಿಸಿದ್ದೇವೆ ಎಂದ ಅವರು, ಗ್ರಾಮೀಣ ಪ್ರದೇಶದ ಗರ್ಭಿಣಿಯರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News