ಮೇಯರ್ ಸ್ಥಾನ ಒಕ್ಕಲಿಗ ಸಮುದಾಯದವರಿಗೆ ನೀಡುವಂತೆ ಆಗ್ರಹ

Update: 2019-09-21 16:56 GMT

ಬೆಂಗಳೂರು, ಸೆ.21: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನವನ್ನು ಒಕ್ಕಲಿಗ ಸಮುದಾಯದವರಿಗೆ ನೀಡುವಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ರಾಜ್ಯ ಒಕ್ಕಲಿಗರ ಸಂಘ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರೊ.ಎಂ.ನಾಗರಾಜ್, ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಸೆ.27ಕ್ಕೆ ನಿಗದಿಯಾಗಿದ್ದು, ಈ ಬಾರಿ ಸಾಮಾನ್ಯ ವರ್ಗಕ್ಕೆ ಮೇಯರ್ ಹುದ್ದೆ ಮೀಸಲು ಬಂದಿದೆ. ಅದರಿಂದ ಒಕ್ಕಲಿಗರ ಸಮುದಾಯಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಬೆಂಗಳೂರು ಮಹಾನಗರ ಅಸ್ತಿತ್ವಕ್ಕೆ ಬಂದು ಇಷ್ಟು ವರ್ಷಗಳಾದರು ಸಿ.ಎಂ.ನಾಗರಾಜ್‌ರಿಗೆ ಬಿಟ್ಟರೆ ಇದುವರೆಗೂ ಮೇಯರ್ ಹುದ್ದೆಯನ್ನು ನಮ್ಮ ಸಮುದಾಯಕ್ಕೆ ನೀಡದಿರುವುದು ನಮಗೆ ತೀವ್ರ ನಿರಾಸೆ ಉಂಟು ಮಾಡಿದೆ. ರಾಜಧಾನಿಯಲ್ಲಿ ಪ್ರಬಲ ಸಮುದಾಯವಾಗಿರುವ ಒಕ್ಕಲಿಗರ ಪ್ರಮಖ ಮೂರು ಪಕ್ಷಗಳಿಂದ ದೊಡ್ಡ ಸಂಖ್ಯೆಯಲ್ಲಿ ಪ್ರತಿ ಬಾರಿಯೂ ಪಾಲಿಕೆಯ ಸದಸ್ಯರಾಗಿ ಆಯ್ಕೆಯಾಗುತ್ತಿದ್ದಾರೆ ಎಂದು ತಿಳಿಸಿದರು.

ಇನ್ನು, 198 ಸದಸ್ಯ ಬಲದ ಬಿಬಿಎಂಪಿಯಲ್ಲಿ 60ರಿಂದ 70 ಒಕ್ಕಲಿಗರ ಸದಸ್ಯರಿದ್ದು, ಅದರಿಂದ ಅವರ ಪಾರದರ್ಶಕತೆ ಮತ್ತು ಅವರ ಸೇವೆಯನ್ನು ಗಣನೀಯವಾಗಿ ಪರಿಗಣಿಸಿ ಒಕ್ಕಲಿಗ ಸಮುದಾಯಕ್ಕೆ ಮೇಯರ್ ಹುದ್ದೆಯನ್ನು ನೀಡಬೇಕು ಎಂದು ಒತ್ತಾಯಿಸಿದರು. ಒಂದು ವೇಳೆ ನಿರಾಕರಿಸಿದ್ದಾರೆ ಬೃಹತ್ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News