ಪಿಎಚ್‌ಡಿ ಕೋರ್ಸ್‌ಗೆ ಶೇ.50ರಷ್ಟು ರಿಯಾಯಿತಿಗೆ ಚಿಂತನೆ

Update: 2019-09-22 17:51 GMT

ಬೆಂಗಳೂರು, ಸೆ.22: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಕೋರ್ಸ್‌ಗೆ ನಿಗದಿಪಡಿಸಿರುವ ಶುಲ್ಕದಲ್ಲಿ ಶೇ.50 ರಿಯಾಯಿತಿ ನೀಡಲು ವಿವಿ ಚಿಂತನೆ ನಡೆಸಲಾಗಿದೆ.

ಪ್ರವೇಶ, ವಾರ್ಷಿಕ ಶುಲ್ಕ ಸೇರಿ ಎಲ್ಲ ರೀತಿಯ ಶುಲ್ಕದಲ್ಲಿ ರಿಯಾಯಿತಿ ಸಿಗಲಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಹಿಂದುಳಿದ ವರ್ಗ, ಅಂಗವಿಕಲ ಹಾಗೂ ಸಾಮಾನ್ಯ ವರ್ಗದವರಿಗೂ ವಿವಿಧ ಹಂತದಲ್ಲಿ ಶುಲ್ಕ ರಿಯಾಯಿತಿಗೆ ಪಟ್ಟಿ ಸಿದ್ಧಪಡಿಸಿ ವಿತ್ತಾಧಿಕಾರಿಗಳ ಅನುಮೊದನೆಗೆ ಕಳುಹಿಸಲಾಗಿದೆ. ಅನುಮೊದನೆ ಸಿಕ್ಕರೆ 2019ನೇ ಸಾಲಿನಿಂದಲೇ ಜಾರಿಗೆ ಬರಲಿದೆ.

2019ನೇ ಸಾಲಿನ ಪಿಎಚ್‌ಡಿಗಾಗಿ ಎರಡೂವರೆ ಸಾವಿರ ಅರ್ಜಿಗಳು ಬಂದಿವೆ. ಅರ್ಜಿ ಶುಲ್ಕ ಸಾಮಾನ್ಯ ವರ್ಗದವರಿಗೆ 2 ಸಾವಿರ ರೂ. ನಿಗದಿಪಡಿಸಲಾಗಿತ್ತು. ಈ ಮೊತ್ತವನ್ನು ಭರಿಸಲು ಕಷ್ಟವಾಗುತ್ತದೆ ಎಂದು ವಿದ್ಯಾರ್ಥಿಗಳು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕುಲಪತಿ ಡಾ. ಕೆ.ಆರ್. ವೇಣುಗೊಪಾಲ್ ಶುಲ್ಕ ಪರಿಷ್ಕರಿಸಿ ವಿತ್ತ ವಿಭಾಗದ ಅನುಮೊದನೆಗೆ ಕಳುಹಿಸಿದ್ದಾರೆ.

ವಿವಿಧ ಹಂತದ ಶುಲ್ಕ: ವಾರ್ಷಿಕ ಶುಲ್ಕ, ಸಂಶೊಧನಾ ಮಹಾ ಪ್ರಬಂಧ ಮಂಡಿಸುವ ಶುಲ್ಕ, ಸಂಶೊಧನಾ ಪ್ರಬಂಧ ಮಂಡಿಸಲು ಅವಧಿ ವಿಸ್ತರಣಾ ಶುಲ್ಕ, ಮತ್ತು ಪ್ರಯೊಗ ಶಾಲಾ ಶುಲ್ಕಗಳನ್ನು ಕಡಿಮೆ ಮಾಡಲು ಬೆಂವಿವಿ ಪ್ರಸ್ತಾಪ ಮಾಡಿದೆ.

ಎಸ್ಸಿ-ಎಸ್ಟಿ, ಹಿಂದುಳಿದ ವರ್ಗ-1, ಅಂಗವಿಕಲ ವಿದ್ಯಾರ್ಥಿಗಳಿಗೆ 11,330 ರೂ. ನಿಗದಿ ಪಡಿಸಲಾಗಿತ್ತು. ಇತರೆ ಹಿಂದುಳಿದ ವರ್ಗ ಮತ್ತು ಕೇಂದ್ರ ಸರಕಾರದ ವಿದ್ಯಾರ್ಥಿ ವೇತನ ಪಡೆಯುತ್ತಿರುವವರೂ ಇದೇ ಶುಲ್ಕ ನೀಡಬೇಕಿತ್ತು. ಪರಿಷ್ಕೃತ ಪಟ್ಟಿ ಪ್ರಕಾರ ಮೀಸಲಾತಿ ವರ್ಗದವರಿಗೆ 2,000 ರೂ., ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಶೇ.50 ಕಡಿತಗೊಳಿಸಲಾಗಿದೆ.

ಸಂಶೋಧನಾ ಮಹಾ ಪ್ರಬಂಧ ಮಂಡಿಸುವ ಶುಲ್ಕ 17,765 ರೂ. ಇತ್ತು. ಅದನ್ನು ಮಿಸಲಾತಿ ವರ್ಗದವರಿಗೆ 2 ಸಾವಿರ ರೂ. ಹಾಗೂ ಸಾಮಾನ್ಯ ವರ್ಗದವರಿಗೆ ಶೇ.50 ಕಡಿತ ಮಾಡಲಾಗಿದೆ.

ಮುಂದಿನ ತಿಂಗಳು ಪಿಎಚ್‌ಡಿ ಪರೀಕ್ಷೆ: ಪಿಎಚ್‌ಡಿ ಪ್ರವೇಶ ಪರೀಕ್ಷೆಯನ್ನು ಬೆಂಗಳೂರು ವಿಶ್ವವಿದ್ಯಾಲಯ ಮುಂದಿನ ತಿಂಗಳು ನಡೆಸುವ ಸಾಧ್ಯತೆ ಇದೆ. ವೇಳಾಪಟ್ಟಿ ಪ್ರಕಾರ ಆ.18ರಂದೇ ಪರೀಕ್ಷೆ ನಡೆಸಬೇಕಿತ್ತು. ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮುಂದೂಡಿದೆ. ಮುಂದಿನ ತಿಂಗಳ ಎರಡನೇ ವಾರದಲ್ಲಿ ಪರೀಕ್ಷೆ ನಡೆಯುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News