ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ದಮಾಮ್- ಖೋಬರ್ ನೂತನ ಸಮಿತಿ ರಚನೆ

Update: 2019-09-22 18:33 GMT

ದಮಾಮ್: ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ಇದರ ಅಂಗಸಂಸ್ಥೆ ಎಸ್ಕೆಎಸ್ಸೆಸ್ಸೆಫ್ ಸಂಘಟನೆಯ ದಮಾಮ್ ಮತ್ತು ಖೋಬರ್ ಪ್ರಾಂತ್ಯದ ನೂತನ ಸಮಿತಿ ರಚನೆ ಹಾಗೂ ಆಧ್ಯಾತ್ಮಿಕ ಸಂಗಮ ಕಾರ್ಯಕ್ರಮ ಇತ್ತೀಚೆಗೆ ಖೋಬರಿನ ತುಕ್ಬಾ ಸೆಂಟರ್ ನಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಬಶೀರ್ ಅಝ್ಹರಿ ಚಾರ್ಮಾಡಿ ಅವರು ವಹಿಸಿದ್ದರು. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಬ್ದುಲ್ ರಹಮಾನ್ ದಾರಿಮಿ ನೆಲ್ಯಾಡಿ, ಸಮಸ್ತ ಪಂಡಿತರು ನಡೆದು ಬಂದ ಹಾದಿ ಹಾಗೂ ಎಸ್ಕೆಎಸ್ಸೆಸ್ಸೆಫ್ ಸಂಘಟನೆಯ ಪ್ರಾಮುಖ್ಯತೆ ಬಗ್ಗೆ ಬಹಳ ಸವಿವರವಾಗಿ ತಿಳಿಸಿಕೊಟ್ಟರು.

ಬಶೀರ್ ಅರಂಬೂರು ಅವರು ನೂತನ ಸಮಿತಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನೆರವೇರಿಸಿದರು. ಅನಸ್ ವಿಟ್ಲ ಸ್ವಾಗತಿಸಿದರು.

ನೂತನ ಸಮಿತಿಯ ಪದಾಧಿಕಾರಿಗಳ ವಿವರ:

ಗೌರವಾಧ್ಯಕ್ಷರು: ಸಯ್ಯದ್ ಆಬಿದ್ ತಂಙಳ್ ಮೊಗ್ರಾಲ್, ಅಧ್ಯಕ್ಷರು: ಅಬ್ದುಲ್ ರಹಮಾನ್ ದಾರಿಮಿ ನೆಲ್ಯಾಡಿ, ಉಪಾಧ್ಯಕ್ಷರು: ಬಶೀರ್ ಅಝ್ಹರಿ ಚಾರ್ಮಾಡಿ ಮತ್ತು ಶಾಫಿ ನಡುಪದವು, ಪ್ರಧಾನ ಕಾರ್ಯದರ್ಶಿ: ಅನಸ್ ವಿಟ್ಲ, ಕಾರ್ಯದರ್ಶಿಗಳು: ಶರೀಫ್ ಮೇನಾಲ ಮತ್ತು ಶಿಹಾಬ್ ಕಡಂಬಾರ್, ಕೋಶಾಧಿಕಾರಿ: ದಾವೂದ್ ಕೃಷ್ಣಾಪುರ, ಸಂಘಟನಾ ಕಾರ್ಯದರ್ಶಿಗಳು: ಮಜೀದ್ ಮಂಜನಾಡಿ ಮತ್ತು ರಝಾಕ್ ಮಂಡೆಕೋಲು, ಕಾರ್ಯಕಾರಿಣಿ ಸದಸ್ಯರು: ಬಶೀರ್ ಅರಂಬೂರು,ಮೊಹಮ್ಮದ್ ಫೌಝಿ ಕೀನ್ಯಾ, ಅಬ್ದುಲ್ ರಶೀದ್ ಬಿಳಿಯೂರು, ಅಬ್ದುಲ್ ಹಮೀದ್ ನೆಟ್ಟಾರು, ಜಮಾಲ್ ಮಂಡೆಕೋಲು, ರಝಾಕ್ ಸೂರಿಕುಮೇರು, ರಝಾಕ್ ಫರಂಗಿಪೇಟೆ, ಜವಾದ್ ಮಂಡೆಕೋಲು, ಜಮ್ಶೀರ್ ಕಂಬಾರ್, ಹನೀಫ್ ಬಂದ್ಯೋಡು ಆಯ್ಕೆಯಾದ ಪದಾಧಿಕಾರಿಗಳನ್ನು ಅನುಮೋದಿಸಲಾಯಿತು.

ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ನಿರ್ವಹಿಸಿದ ಬಶೀರ್ ಅರಂಬೂರು ಅವರು ನೂತನ ಸಮಿತಿಗೆ ಶುಭ ಹಾರೈಸಿ ಮಾತನಾಡಿ, ಸಮಿತಿಗೆ ಇನ್ನಷ್ಟು ಸದಸ್ಯರನ್ನು ಸೇರಿಸಿ ಎಲ್ಲರೂ ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ದಮಾಮ್- ಖೋಬರ್ ಸಮಿತಿಯ ಉನ್ನತಿಗಾಗಿ ಶ್ರಮಿಸಬೇಕೆಂದು ಕೇಳಿಕೊಂಡರು.

ಶರೀಫ್ ಮೇನಾಲ ಧನ್ಯವಾದಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News