ಸೆ.28ಕ್ಕೆ ‘ವಾಕಿಂಗ್ ಟೂರ್ ಇನ್ ನಿಮ್ಹಾನ್ಸ್’ ಅಭಿಯಾನ

Update: 2019-09-24 17:03 GMT

ಬೆಂಗಳೂರು, ಸೆ.24: ಸಾರ್ವಜನಿಕರಲ್ಲಿ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ(ನಿಮ್ಹಾನ್ಸ್) ಸೆ.28 ರಂದು ‘ವಾಕಿಂಗ್ ಟೂರ್ ಇನ್ ನಿಮ್ಹಾನ್ಸ್’ ಅಭಿಯಾನ ಹಮ್ಮಿಕೊಂಡಿದೆ.

ಕಳೆದ ವರ್ಷ ಮೊದಲ ಬಾರಿಗೆ ಆರಂಭ ಮಾಡಿದ್ದ ಅಬಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತ ಹಿನ್ನೆಲೆಯಲ್ಲಿ ಈ ವರ್ಷವೂ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಮಾನಸಿಕ ಆರೋಗ್ಯದ ಬಗ್ಗೆ ಜನರಿಗಿರುವ ತಪ್ಪು ಅಭಿಪ್ರಾಯವನ್ನು ಹೋಗಲಾಡಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ನಿಮ್ಹಾನ್ಸ್ ಸಂಸ್ಥೆಯ ಪ್ರಾಧ್ಯಾಪಕಿ ಪ್ರೊ.ಕೆ.ಎಸ್.ಮೀನಾ ಹೇಳಿದ್ದಾರೆ.

ನಿಮ್ಹಾನ್ಸ್ ಎಂದ ಕೂಡಲೇ ಒಳಗೆ ಕೂಡಿ ಹಾಕಿ ಶಾಕ್ ಟ್ರೀಟ್‌ಮೆಂಟ್ ನೀಡಲಾಗುತ್ತದೆ, ಹಿಂಸಿಸಲಾಗುತ್ತದೆ ಎಂಬ ತಪ್ಪು ಕಲ್ಪನೆಗಳಿವೆ. ಹೀಗಾಗಿ, ಈ ಅಭಿಯಾನ ಅಪನಂಬಿಕೆಗಳನ್ನು ಹೋಗಲಾಡಿಸಿ ಮಾನಸಿಕ ರೋಗಿಗಳಿಗೆ ನೀಡುವ ಚಿಕಿತ್ಸಾ ವಿಧಾನಗಳನ್ನು ಪರಿಚಯಿಸಲಾಗುತ್ತದೆ.

ಮಾಹಿತಿ ವಿವರಣೆ: ಅಂದು ನಿಮ್ಹಾನ್ಸ್ ಆವರಣದಲ್ಲಿ ಒಂದು ಸುತ್ತು ಎಲ್ಲ 26 ಚಿಕಿತ್ಸಾ ವಿಭಾಗಗಳು, ಮ್ಯೂಸಿಯಂ, ಯೋಗ ಕೇಂದ್ರಗಳಿಗೆ ಭೇಟಿ, ಪ್ರಮುಖ ಸಂಶೋಧನೆಗಳ ಮಾಹಿತಿ ನೀಡಲಾಗುತ್ತದೆ ಎಂದು ಮೀನಾ ವಿವರಿಸಿದ್ದಾರೆ.

ಆಸಕ್ತರು ಇಮೇಲ್ events.mhedu@gmail.com ಗೆ ತಮ್ಮ ಹೆಸರು ಕಳುಹಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. 200 ರೂ.ಶುಲ್ಕ ನಿಗದಿಪಡಿಸಿದ್ದು, ಹೆಚ್ಚಿನ ಮಾಹಿತಿಗಾಗಿ 080-26995156 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News