ಜಿದ್ದಾ: ಐ.ಎಸ್.ಎಫ್. ವತಿಯಿಂದ ಕ್ರೀಡೋತ್ಸವ

Update: 2019-09-25 06:13 GMT

ಜಿದ್ದಾ, ಸೆ.25: ಇಂಡಿಯನ್ ಸೋಶಿಯಲ್ ಫೋರಂ(ಐ.ಎಸ್.ಎಫ್.) ವತಿಯಿಂದ ಸೌದಿ ರಾಷ್ಟ್ರೀಯ ದಿನಾಚರಣೆಯ ಪ್ರಯುಕ್ತ ಸೆ.20ರಂದು ಜಿದ್ದಾ ಹಿಲಾಲ್ ಕ್ರೀಡಾಂಗಣದಲ್ಲಿ ಕ್ರೀಡೋತ್ಸವ ಆಯೋಜಿಸಲಾಗಿತ್ತು.

ಜಿದ್ದಾದ ಭಾರತೀಯ ರಾಯಭಾರಿ ಕಚೇರಿಯ ಕಾರ್ಮಿಕ ರಾಯಭಾರಿ ಎಸ್.ಕೆ.ಶರ್ಮಾ ಕ್ರೀಡೋತ್ಸವವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಭಾರತವು ಸೌದಿ ಅರೇಬಿಯಾದೊಂದಿಗೆ ಅತ್ಯುತ್ತಮ ಸಂಬಂಧವನ್ನು ಹೊಂದಿದೆ. ಸೌದಿ ಅರೇಬಿಯಾದಲ್ಲಿ ದುಡಿಯುತ್ತಿರುವ ಅನಿವಾಸಿ ಭಾರತೀಯರು ಸೌದಿಯ ಎಲ್ಲಾ ಕಾನೂನುಗಳಿಗೆ ಬದ್ಧರಾಗಿ ಜೀವಿಸುತ್ತಿದ್ದಾರೆ. ಸೌದಿಯಲ್ಲಿರುವ ಇತರ ದೇಶಗಳ ಪ್ರಜೆಗಳಿಗೆ ಹೋಲಿಸಿದರೆ ಭಾರತೀಯರು ಸೌದಿಯಲ್ಲಿ ಕಾನೂನು ಪಾಲನೆಯ ಉತ್ತಮ ದಾಖಲೆಯನ್ನು ಹೊಂದಿದವರಾಗಿದ್ದಾರೆ ಎಂದು ಸ್ವತಃ ಸೌದಿ ಅಧಿಕಾರಿಗಳು ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಹಲವು ಸಂದರ್ಭಗಳಲ್ಲಿ ಹಂಚಿಕೊಂಡಿದ್ದಾರೆ ಎಂದು ಹೇಳಿದರು.

ಐ.ಎಸ್.ಎಫ್. ಪಶ್ಚಿಮ ಪ್ರಾಂತ್ಯದ ಅಧ್ಯಕ್ಷ ಅಶ್ರಫ್ ಮರವೂರು ಐ.ಎಸ್.ಎಫ್.ನ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು.

ಇಂಡಿಯನ್ ಸೋಶಿಯಲ್ ಫೋರಂ ಪಶ್ಚಿಮ ಪ್ರಾಂತ್ಯದ ಕರ್ನಾಟಕ ಘಟಕದ ಉಪಾಧ್ಯಕ್ಷ ಇಸ್ಮಾಯೀಲ್ ಕಲ್ಲಡ್ಕ ಕ್ರೀಡೋತ್ಸವದ ಅಧ್ಯಕ್ಷತೆ ವಹಿಸಿದ್ದರು.

ಕ್ರೀಡೋತ್ಸವದಲ್ಲಿ ಭಾರತದ ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ಲಗೋರಿ, ಹಗ್ಗ ಜಗ್ಗಾಟ ಒಳಗೊಂಡಂತೆ ಓಟ ಸ್ಪರ್ಧೆ ಮತ್ತು ಇತರ ಆಟಗಳನ್ನು ಆಯೋಜಿಸಲಾಯಿತು. ಮಕ್ಕಳಿಗಾಗಿ ಪ್ರತ್ಯೇಕ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಆಸಕ್ತಿದಾಯಕವೆಂದರೆ ಕಬಡ್ಡಿ ಮತ್ತು ಲಗೋರಿ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಪ್ರಶಸ್ತಿಯಾಗಿ ಆಡು ವಿತರಿಸಲಾಯಿತು.

 ಕ್ರೀಡೋತ್ಸವದಲ್ಲಿ ಐ ಎಫ್ ಎಫ್ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಫಯಾಝುದ್ದೀನ್, ಉದ್ಯಮಿ ಮುಹಮ್ಮದ್ ಇಸ್ಮಾಯೀಲ್, ಐಎಫ್ ಎಫ್ ಪಶ್ಚಿಮ ಪ್ರಾಂತ್ಯದ ಕರ್ನಾಟಕ ಘಟಕ ದ ಅಧ್ಯಕ್ಷ ಹಾರಿಸ್ ಗೂಡಿನಬಳಿ, ಎಕ್ಸಲೆನ್ಸ್ ಟ್ರೇಡಿಂಗ್ ನ ಅಧ್ಯಕ್ಷ ಶೌಕತ್, ಐಎಫ್ ಎಫ್ ಜಿದ್ದಾ ಘಟಕಾಧ್ಯಕ್ಷ ಮುದಸ್ಸರ್ ಅಹ್ಮದ್ ಹಾಗೂ ಇತರರು ಭಾಗವಹಿಸಿದ್ದರು.

ಐಎಫ್ ಎಫ್ ಕರ್ನಾಟಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಫೀಕ್ ಬಿಜೈ ಸ್ವಾಗತಿಸಿದರು, ಐಎಸ್ ಎಫ್ ಅಝೀಝಿಯ ಘಟಕದ ಅಧ್ಯಕ್ಷ ಆಸಿಫ್ ಗಂಜಿಮಠ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News