ಬೈಕ್, ಮೊಬೈಲ್ ಕಳವು: ಇಬ್ಬರು ಅಪ್ರಾಪ್ತರು ಸೇರಿ ಮೂವರ ಬಂಧನ
Update: 2019-09-25 23:38 IST
ಬೆಂಗಳೂರು, ಸೆ.25: ಮದ್ಯ ಸೇವನಗೆಗಾಗಿ ಬೈಕ್, ಮೊಬೈಲ್ ಕಳವು ಮಾಡುತ್ತಿದ್ದ ಆರೋಪದಡಿ ಇಬ್ಬರು ಅಪ್ರಾಪ್ತರು ಸೇರಿ ಮೂವರನ್ನು ಇಲ್ಲಿನ ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.
ಪರಪ್ಪನ ಅಗ್ರಹಾರದ ಸಂದೀಪ್ (18) ಹಾಗೂ 17 ವರ್ಷದ ಇಬ್ಬರು ಬಾಲಕರನ್ನು ಬಂಧಿಸಿ, ಮೂರು ಬೈಕ್, 8 ಮೊಬೈಲ್, 1 ಲ್ಯಾಪ್‌ಟಾಪ್ ಸೇರಿ ಒಟ್ಟು 11 ಲಕ್ಷ ರೂ. ಮೌಲ್ಯದ ಮಾಲು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.