ಖಶೋಗಿ ಹತ್ಯೆ ನನ್ನ ಕಣ್ಗಾವಲಿನಲ್ಲಿ ನಡೆಯಿತು ಎಂದು ಸಾಕ್ಷ್ಯಚಿತ್ರದಲ್ಲಿ ಒಪ್ಪಿಕೊಂಡ ಸೌದಿ ರಾಜಕುಮಾರ: ಆರೋಪ

Update: 2019-09-26 08:31 GMT

ರಿಯಾಧ್, ಸೆ.26: “ಕಳೆದ ವರ್ಷ ನಡೆದ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆ ನನ್ನ ಕಣ್ಗಾವಲಿನಲ್ಲಿ ನಡೆದಿರುವುದರಿಂದ ಅದರ ಜವಾಬ್ದಾರಿಯನ್ನು ಹೊರುತ್ತೇನೆ” ಎಂದು ಸೌದಿ ಅರೇಬಿಯಾದ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಅವರು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ಈ ಹೇಳಿಕೆ ನೀಡಿರುವ ಪಿಎಸ್‍ ಬಿ ಸಾಕ್ಷ್ಯಚಿತ್ರ ಮುಂದಿನ ವಾರ ಪ್ರಸಾರವಾಗಲಿದೆ.

ವಾಷಿಂಗ್ಟನ್ ಪೋಸ್ಟ್ ಅಂಕಣಕಾರರಾಗಿದ್ದ ಖಶೋಗಿಯನ್ನು ಇಸ್ತಾಂಬುಲ್ ನ ಸೌದಿ ಕಾನ್ಸುಲೇಟ್ ಕಚೇರಿಯೊಳಗೆ ಹತ್ಯೆಗೈದ ಘಟನೆ ಕುರಿತಂತೆ ಮುಹಮ್ಮದ್ ಬಿನ್ ಸಲ್ಮಾನ್ ಇಲ್ಲಿಯ ತನಕ  ಸಾರ್ವಜನಿಕವಾಗಿ ಏನನ್ನು ಹೇಳಿಲ್ಲ. ಅವರ ಆದೇಶದಿಂತೆ ಈ ಹತ್ಯೆ ನಡೆದಿದೆ ಎಂದು ಸಿಐಎ ಹಾಗೂ ಕೆಲ ಪಾಶ್ಚಿಮಾತ್ಯ ಸರಕಾರಗಳು ಹೇಳಿದ್ದರೂ ಸೌದಿ ಅಧಿಕಾರಿಗಳು ಅದನ್ನು ನಿರಾಕರಿಸಿದ್ದರು.

“ಅದು ನನ್ನ ಕಣ್ಗಾವಲಿನಲ್ಲಿ ನಡೆದಿದೆ. ನಾನು ಜವಾಬ್ದಾರಿ ಹೊರುತ್ತೇನೆ, ಏಕೆಂದರೆ ಅದು ನನ್ನ ಕಣ್ಗಾವಲಿನಲ್ಲಿ ನಡೆದಿದೆ'' ಎಂದು ಪಿಬಿಎಸ್ ನ ಮಾರ್ಟಿನ್ ಸ್ಮಿತ್ ಅವರಿಗೆ ಹೇಳಿರುವುದು ಸಾಕ್ಷ್ಯಚಿತ್ರ ‘ದಿ ಕ್ರೌನ್ ಪ್ರಿನ್ಸ್ ಆಫ್ ಸೌದಿ ಅರೇಬಿಯಾ' ಇದರ ಮುನ್ನೋಟದಲ್ಲಿ ಉಲ್ಲೇಖವಾಗಿದೆ. ಈ ಸಾಕ್ಷ್ಯಚಿತ್ರ ಅಕ್ಟೋಬರ್ 1ರಂದು ಬಿಡುಗಡೆಗೊಳ್ಳಲಿದೆ.

ಕೊಲೆಗಾರರು ಖಾಸಗಿ ಸರಕಾರಿ ಜೆಟ್ ಗಳಲ್ಲಿ ಪ್ರಯಾಣಿಸಿರಬಹುದೇ ಎಂಬ ಪ್ರಶ್ನೆಗೆ, “ಇದರ ಹಿಂದೆ ಇರಲು ನನ್ನ ಬಳಿ ಅಧಿಕಾರಿಗಳು, ಸಚಿವರಿದ್ದಾರೆ. ಅವರು ಜವಾಬ್ದಾರರು. ಅವರಿಗೆ ಅದನ್ನು ಮಾಡುವ ಅಧಿಕಾರವಿದೆ'' ಎಂದು ಕ್ಯಾಮರಾದ ಮುಂದೆ ನಡೆದಿರದ ಈ ಸಂಭಾಷಣೆಯಲ್ಲಿ  ರಾಜಕುಮಾರ ಹೇಳಿದ್ದಾರೆಂದು ಸ್ಮಿತ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News