×
Ad

ನಕಲಿ ಲೇಬಲ್ ಅಂಟಿಸಿ ಬೀಡಿಗಳ ಮಾರಾಟ: ಇಬ್ಬರು ಆರೋಪಿಗಳ ಬಂಧನ

Update: 2019-09-26 23:07 IST

ಬೆಂಗಳೂರು, ಸೆ.26: ಗಣೇಶ ಹಾಗೂ ನ್ಯೂ ಎಸ್‌ಕೆ ಬೀಡಿಗಳ ನಕಲಿ ಲೇಬಲ್ ಅಂಟಿಸಿ ಬೀಡಿಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಲ್ಲೇಶ್ವರಂ ಠಾಣಾ ಪೊಲೀಸರು ಬಂಧಿಸಿದ್ದಾರೆ.

ತುಮಕೂರಿನ ಉಪ್ಪಾರಹಳ್ಳಿಯ ಮುಹಮ್ಮದ್ ರಫೀಕ್(44), ಬೆನ್ಸನ್ ಟೌನ್‌ನ ಶಬ್ಬೀರ್ ಅಹ್ಮದ್(50) ಬಂಧಿತ ಆರೋಪಿಗಳು. ಇವರಿಂದ ಒಂದು ಲಕ್ಷ ರೂ. ಮೌಲ್ಯದ ಗಣೇಶ್ ನಕಲಿ ಬೀಡಿಯ 20 ಬಂಡಲ್‌ಗಳು, ನ್ಯೂ ಎಸ್‌ಕೆ ನಕಲಿ ಬೀಡಿಯ 54 ಬಂಡಲ್‌ಗಳನ್ನು ಲೇಬಲ್‌ಗಳು ಹಾಗೂ ಒಂದು ಲಕ್ಷ ನಕಲಿ ಬೀಡಿಗಳ ಕಟ್ಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News