×
Ad

ಬಸ್ ಢಿಕ್ಕಿ: ಬೀದಿಬದಿ ವ್ಯಾಪಾರಿ ಸಾವು

Update: 2019-09-27 23:23 IST

ಬೆಂಗಳೂರು, ಸೆ.27: ಆಕಸ್ಮಿಕವಾಗಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಬೀದಿಬದಿ ವ್ಯಾಪಾರಿ ಸಾವನ್ನಪ್ಪಿರುವ ಘಟನೆ ಇಲ್ಲಿನ ವಿವಿಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶ್ರೀನಗರದ ಕಾಳಿದಾಸ ನಗರದ ರಾಮದಾಸ್ (45) ಮೃತ ವ್ಯಾಪಾರಿ ಎಂದು ತಿಳಿದುಬಂದಿದೆ.

ತಳ್ಳುಗಾಡಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ರಾಮದಾಸ್ ಅವರು, ಶುಕ್ರವಾರ ಬೆಳಗ್ಗೆ 8ರ ವೇಳೆ ಸಿಟಿ ಮಾರುಕಟ್ಟೆಗೆ ತರಕಾರಿ ತರಲು ಗಾಡಿ ನೂಕಿಕೊಂಡು ಹೋಗುತ್ತಿದ್ದರು. ಮಾರ್ಗಮಧ್ಯೆ ಪ್ರದೀಪ್ ಸರ್ಕಲ್ ಬಳಿ ಬಿಎಂಟಿಸಿ ಬಸ್‌ವೊಂದು ಕೆಟ್ಟುನಿಂತಿದೆ. ಈ ವೇಳೆ, ರಾಮನಗರ ಮಾರ್ಗವಾಗಿ ಹೋಗುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಮಧ್ಯೆ ರಾಮದಾಸ್ ಗಾಡಿ ಸಿಕ್ಕಿದೆ. ಆಕಸ್ಮಿಕವಾಗಿ ಬಸ್ ಢಿಕ್ಕಿ ಹೊಡೆದು, ಗಂಭೀರವಾಗಿ ಗಾಯಗೊಂಡಿದ್ದರು ಎನ್ನಲಾಗಿದೆ.

ರಾಮದಾಸ್ ಅವರನ್ನು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ವಿವಿಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News