ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ರಕ್ಷಿಸಲು ಆಗ್ರಹಿಸಿ ಪ್ರದರ್ಶನ

Update: 2019-09-29 17:15 GMT

ಬೆಂಗಳೂರು, ಸೆ. 29: ಕಾಶ್ಮೀರದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಿಸಿ, ಅಲ್ಲಿನ ಜನರ ನಿತ್ಯದ ಬದುಕನ್ನು ಸರಿಪಡಿಸಿ ಎಂದು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್(ಎಐವೈಎಫ್) ಕಾರ್ಯಕರ್ತರು ಇಲ್ಲಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರದರ್ಶನ ನಡೆಸಿದರು.

ರವಿವಾರ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರದರ್ಶನ ನಡೆಸಿದ ಕಾರ್ಯಕರ್ತರು, ಕಾಶ್ಮೀರದಲ್ಲಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಅಲ್ಲಿನ ಜನತೆ ಪ್ರತಿನಿತ್ಯ ಸೇನೆ ಮತ್ತು ಭಯೋತ್ಪಾದಕರ ಆತಂಕದಲ್ಲಿ ಬದುಕು ದೂಡಬೇಕಿದೆ. ಹೀಗಾಗಿ ಕಾಶ್ಮೀರ ಜನತೆಗೆ ಯಾತಾಸ್ಥಿತಿ ಜೀವನ ನಡೆಸಲು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು.

ಬಿಜೆಪಿ ಜನವಿರೋಧಿ ಆರ್ಥಿಕ ನೀತಿಯಿಂದ ಉದ್ಯೋಗಾವಕಾಶಗಳಿಲ್ಲ. ಹೀಗಾಗಿ ಕೇಂದ್ರ ಸರಕಾರ ಭಗತ್ ಸಿಂಗ್ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯ್ದೆ ಅನುಷ್ಟಾನಕ್ಕೆ ತರಬೇಕು. ಆ ಮೂಲಕ ಯುವಜನರಿಗೆ ಹೆಚ್ಚಿನ ಉದ್ಯೋಗ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಸಿಪಿಐ ಕಾರ್ಯದರ್ಶಿ ಮಂಡಳಿ ಸಹಕಾರ್ಯದರ್ಶಿ ಕೆ.ಎಸ್. ಜನಾರ್ಧನ್, ಎಐಟಿಯುಸಿ ಸಹ ಕಾರ್ಯದರ್ಶಿ ಸತ್ಯಾನಂದ, ಎಐವೈಎಫ್ ಜಿಲ್ಲಾಧ್ಯಕ್ಷ ಹರೀಶ್ ಬಾಲ, ಕಾರ್ಯದರ್ಶಿ ವೀರಣ್ಣ ಸೇರಿ ಇನ್ನಿತರರು ಪ್ರದರ್ಶನದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News