ಖಶೋಗಿ ಹತ್ಯೆಗೆ ಆದೇಶ ನೀಡಿದ್ದು ಯಾರು?: ಇಲ್ಲಿದೆ ಸೌದಿ ಯುವರಾಜನ ಉತ್ತರ

Update: 2019-09-30 14:17 GMT

ವಾಶಿಂಗ್ಟನ್, ಸೆ. 30: ಸೌದಿ ಅರೇಬಿಯದ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಯ ಸಂಪೂರ್ಣ ಹೊಣೆಯನ್ನು ನಾನು ಸ್ವೀಕರಿಸುತ್ತೇನೆ ಎಂದು ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಹೇಳಿದ್ದಾರೆ. ಆದರೆ, ಹತ್ಯೆಗೆ ತಾನು ಆದೇಶ ನೀಡಿದೆ ಎಂಬ ಆರೋಪಗಳನ್ನು ಅವರು ನಿರಾಕರಿಸಿದ್ದಾರೆ.

ಅಮೆರಿಕದ ಸುದ್ದಿವಾಹಿನಿ ಸಿಬಿಎಸ್‌ನ ‘60 ಮಿನಿಟ್ಸ್’ ಕಾರ್ಯಕ್ರಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆ. ಸಂದರ್ಶನ ರವಿವಾರ ಪ್ರಸಾರಗೊಂಡಿತು.

‘‘ಅದು ಹೇಯ ಅಪರಾಧವಾಗಿತ್ತು’’ ಎಂದು 34 ವರ್ಷದ ಯುವರಾಜ ಅಭಿಪ್ರಾಯಪಟ್ಟರು. ‘‘ಆದರೆ ಸೌದಿ ಅರೇಬಿಯದ ನಾಯಕನಾಗಿ ನಾನು ಅದರ ಸಂಪೂರ್ಣ ಜವಾಬ್ದಾರಿಯನ್ನು ಸ್ವೀಕರಿಸುತ್ತೇನೆ. ಯಾಕೆಂದರೆ ಸೌದಿ ಸರಕಾರಕ್ಕಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಗಳಿಂದ ಆ ಅಪರಾಧ ಸಂಭವಿಸಿದೆ’’ ಎಂದರು.

ಖಶೋಗಿಯ ಹತ್ಯೆಗೆ ನೀವು ಆದೇಶ ನೀಡಿದ್ದೀರಾ ಎಂಬ ಪ್ರಶ್ನೆಗೆ, ‘‘ಖಂಡಿತವಾಗಿಯೂ ಇಲ್ಲ’’ ಎಂದು ಯುವರಾಜ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News