ಸೌದಿ ಬಾಲಕನ ಗಾಂಧಿ ಪ್ರೇಮ!

Update: 2019-10-01 05:10 GMT

ಮುಗ್ಧತೆ ತುಂಬಿದ ಮುಖದ ಈ ಬಾಲಕನ ಹೆಸರು ಯೂಸುಫ್ ಸಹೀದ್ ಅಲ್ ಭಕ್ಷಿ. ಈತ ಸೌದಿ ಅರೇಬಿಯಾ ನಿವಾಸಿ. ಯೂಸುಫ್ ಈ ಬಾಲಕನ ಹೆಸರಾದರೆ, ಸಹೀದ್ ಈತನ ತಂದೆಯ ಹೆಸರು ಮತ್ತು ಭಕ್ಷಿ ಎಂಬುದು ಈತನ ಮನೆತನದ ಹೆಸರು.

ನನ್ನ ಕಫೀಲ್‌ನ ಮೊಮ್ಮಗನಾಗಿರುವ ಯೂಸುಫ್ ನಾನು ಸೌದಿಗೆ ತೆರಳಿದ ಸಂಧರ್ಭ 3- 4  ವರ್ಷದ ಪುಟ್ಟ ಬಾಲಕ. ಈತನಿಗೆ ಚಿಕ್ಕಂದಿನಿಂದಲೇ ಓದುವುದರಲ್ಲಿ, ಜಗತ್ತಿನ ಪ್ರಾಚೀನ ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತು ಕಲಿಯುವ ಆಸಕ್ತಿ. ನನ್ನನ್ನು ಕಂಡಾಗಲೆಲ್ಲಾ ಭಾರತದ ಬಗ್ಗೆ ಕುತೂಹಲಭರಿತನಾಗಿ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾನೆ. ಭಾರತ ಸದ್ಯ ಎದುರಿಸುತ್ತಿರುವ ಸವಾಲುಗಳು ಬಗ್ಗೆಯೂ ಈತ ಪ್ರಶ್ನಿಸುತ್ತಿರುತ್ತಾನೆ.

ಸಮಯ ಸಿಕ್ಕಾಗಲೆಲ್ಲ ಹಿಂದಿ ನ್ಯೂಸ್ ಚಾನೆಲ್ ನೋಡುವಂತೆಯೂ, ಅರಬಿ ಭಾಷೆಗೆ ಭಾಷಾಂತರಗೊಂಡ ಭಾರತದ ಪುಸ್ತಕಗಳನ್ನು ಓದುವಂತೆಯೂ ಯೂಸುಫ್ ನನ್ನು ನಾನು ಪ್ರೇರೇಪಿಸುತ್ತಿದ್ದೆ.  

ಯೂಸುಫ್ ನಿಗೆ ಮಹಾತ್ಮ ಗಾಂಧೀಜಿಯವರ ಮೇಲೆ ಅಪಾರ ಗೌರವ ಮತ್ತು ಪ್ರೀತಿ. ಗಾಂಧೀಜಿಯವರನ್ನು (ಜಿದ್ದು ಗಾಂಧಿ) ‘ಗಾಂಧಿ ತಾತ’ ಎಂದು ಈತ ಕರೆಯುತ್ತಾನೆ.  ಗಾಂಧೀಜೀಯವರ ಬಗ್ಗೆ ಕಲ್ಪನೆಗಳನ್ನು ಕಟ್ಟಿಕೊಂಡು ಅವರ ದಿಟ್ಟ ನಡೆ ಮತ್ತು ಅಹಿಂಸಾತ್ಮಕ ಚಳವಳಿ, ಸರಳ ನಡವಳಿಕೆಗಳಿಂದ ಪ್ರೇರಣೆ ಪಡೆದ ಈತ "ಮೆನ್ ಹಾದಾ ಗಾಂಧಿ" (ಯಾರು ಈ ಗಾಂಧಿ) ಎಂಬ ಅರಬಿ ಭಾಷೆಗೆ ಭಾಷಾಂತರಗೊಂಡ ಕೃತಿಯನ್ನು ಇತ್ತೀಚೆಗೆ ಖರೀದಿಸಿದ್ದಾನೆ. ಈ ಪುಸ್ತಕವನ್ನು ಶಾಲೆಯ ಓದು, ಬರಹದ ನಡುವೆ ಅತ್ಯುತ್ಸಾಹದಿಂದ ಒಂದು ವಾರದಲ್ಲಿ ಓದಿ ಮುಗಿಸಿದ್ದಾನೆ.

ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ಪ್ರಮುಖ ನಾಯಕರಾದ ಡಾ.ರೆವೆರೆಂಡ್ ಮಾರ್ಟಿನ್ ಲೂಥರ್ ಕಿಂಗ್ ಹಾಗೂ ನೆಲ್ಸನ್ ಮಂಡೇಲ ಅವರು ಗಾಂಧೀಜಿಯವರಿಂದ ಹೇಗೆ ಪ್ರಭಾವಿತರಾಗಿದ್ದರೋ ಹಾಗೆಯೇ ಈ ಪುಟ್ಟ ಬಾಲಕ ಭವಿಷ್ಯದ ಸೌದಿ ಅರೇಬಿಯಾದ ಗಾಂಧಿಯಾಗಿ ಪ್ರಜ್ವಲಿಸಲಿ ಎಂದು ಹಾರೈಸೋಣ.

ಸೌದಿಯ ಈ ಬಾಲಕನ ಗಾಂಧಿ ಪ್ರೇಮಕ್ಕೆ ಬಿಗ್ ಸೆಲ್ಯೂಟ್.

Writer - ಲೇಖಕ: ಇಸಾಕ್ ಪಜೀರ್

contributor

Editor - ಲೇಖಕ: ಇಸಾಕ್ ಪಜೀರ್

contributor

Similar News