ಪ್ರೊ ಕಬಡ್ಡಿ: ಪುಣೇರಿ ವಿರುದ್ಧ ಟೆಟಾನ್ಸ್ ಪಲ್ಟಿ

Update: 2019-10-04 04:38 GMT

ಪಂಚಕುಲ, ಅ.3: ಅತ್ಯಂತ ಪೈಪೋಟಿಯಿಂದ ಕೂಡಿದ್ದ ಪ್ರೋ ಕಬಡ್ಡಿ ಲೀಗ್ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡ ತೆಲುಗು ಟೈಟಾನ್ಸ್ ತಂಡವನ್ನು 53-50 ಅಂಕಗಳ ಅಂತರದಿಂದ ರೋಚಕವಾಗಿ ಮಣಿಸಿತು.

ಇಲ್ಲಿ ಗುರುವಾರ ನಡೆದ 119ನೇ ಲೀಗ್ ಪಂದ್ಯದಲ್ಲಿ ಮಂಜೀತ್(12 ಅಂಕ), ಸುಶಾಂತ್ ಸೈಲ್(11 ಅಂಕ) ಹಾಗೂ ಸುರ್ಜೀತ್ ಸಿಂಗ್(7)ಪುಣೇರಿ ಗೆಲುವಿಗೆ ನೆರವಾದರು. ಇಂದಿನ ಸೋಲಿನೊಂದಿಗೆ ಟೈಟಾನ್ಸ್ ತಂಡದ ಪ್ಲೇ-ಆಫ್ ಪ್ರವೇಶಿಸುವ ವಿಶ್ವಾಸ ಕಮರಿಹೋಗಿದ.

ಯು.ಪಿ.ಯೋಧಾ ತಂಡ ಅಗ್ರ-6ರಲ್ಲಿ ಕೊನೆಯ ಸ್ಥಾನ ಬಾಚಿಕೊಂಡಿದೆ.

 ಪರಾಜಿತ ತೆಲುಗು ಪರ ರಾಕೇಶ್ ಗೌಡ 17 ಅಂಕ ಗಳಿಸಿದರು. 21ನೇ ಪಂದ್ಯದಲ್ಲಿ 7ನೇ ಗೆಲುವು ದಾಖಲಿಸಿ 47 ಅಂಕ ಗಳಿಸಿರುವ ಪುಣೇರಿ ಅಂಕಪಟ್ಟಿಯಲ್ಲಿ 8ನೇ ಸ್ಥಾನ ಪಡೆದಿದೆ.

ತಾನಾಡಿದ 19ನೇ ಪಂದ್ಯದಲ್ಲಿ 11ನೇ ಸೋಲು ಕಂಡಿರುವ ಟೈಟಾನ್ಸ್ ತಂಡ 12 ತಂಡಗಳಿರುವ ಅಂಕಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News