ಸಮವಸ್ತ್ರ ಎಲ್ಲಿ?

Update: 2019-10-04 09:02 GMT

ಮಾನ್ಯರೇ,

2019-20ನೇ ಸಾಲಿನ ಸರಕಾರಿ ಶಾಲಾ ಮಕ್ಕಳಿಗೆ ಎರಡನೇ ಸೆಟ್ ಸಮವಸ್ತ್ರ ಇನ್ನೂ ಒದಗಿಸಿಲ್ಲ. ಮಕ್ಕಳು ಶನಿವಾರ ಬಿಟ್ಟು ಉಳಿದ ಐದು ದಿನ ಕೂಡ ಒಂದೇ ಸಮವಸ್ತ್ರದಲ್ಲಿ ದಿನ ದೂಡಬೇಕಾದ ಪರಿಸ್ಥಿತಿ ಬಂದಿದೆ. ಈ ಕುರಿತಂತೆ ಪ್ರಾಥಮಿಕ ಮತ್ತು ಫ್ರೌಡ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಈ ಸಾಲಿನಲ್ಲೇ ಎರಡನೇ ಸೆಟ್ ಸಮವಸ್ತ್ರ ಪೂರೈಸಲು ಪೂರಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಆದರೆ ಯಾವಾಗ?

ಸರಕಾರ ತಡ ಮಾಡದೆ ಕೂಡಲೇ ಎರಡನೇ ಸೆಟ್ ಸಮವಸ್ತ್ರ ವಿತರಣೆ ಮಾಡಬೇಕು ಎಂಬುವುದು ಪಾಲಕರ ಒತ್ತಾಯವಾಗಿದೆ.

-ನಬಿಸಾಬ ಆರ್.ಬಿ. ದೋಟಿಹಾಳ, ಕೊಪ್ಪಳ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News