ಉಪಮೇಯರ್, ಆಯುಕ್ತರಿಗಾಗಿ ದುಬಾರಿ ಕಾರು ಖರೀದಿ ಆರೋಪ: ಸಾರ್ವಜನಿಕರಿಂದ ಆಕ್ರೋಶ
Update: 2019-10-04 23:15 IST
ಬೆಂಗಳೂರು, ಅ.4: ಸಂತ್ರಸ್ತರಿಗೆ ಪರಿಹಾರ ನೀಡಲು ಮುಖ್ಯಮಂತ್ರಿಗಳು ರಾಜ್ಯದ ಬೊಕ್ಕಸದಲ್ಲಿ ಹಣ ಇಲ್ಲ ಎಂದು ಹೇಳಿದ್ದಾರೆ. ಆದರೆ, ಬಿಬಿಎಂಪಿಯಲ್ಲಿ ಅಧಿಕಾರ ವಹಿಸಿಕೊಂಡು 48 ಗಂಟೆಯಲ್ಲಿ ಉಪಮೇಯರ್ ಹಾಗೂ ಬಿಬಿಎಂಪಿ ಆಯುಕ್ತರಿಗಾಗಿ ದುಬಾರಿ ಮೌಲ್ಯದ ಕಾರನ್ನು ಖರೀದಿಸಲಾಗಿದೆ ಎನ್ನಲಾಗಿದ್ದು, ಈ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ನಗರದ ನಾಗರಿಕರಿಗೆ ಮೂಲಭೂತ ಸೌಕರ್ಯ ಒದಗಿಸಬೇಕಾಗಿರುವುದು ಬಿಬಿಎಂಪಿಯ ಕರ್ತವ್ಯ. ಆದರೆ, ಆಡಳಿತ ನಡೆಸುವವರು ತಮ್ಮ ಹಿತಾಸಕ್ತಿಗಾಗಿ ಇಷ್ಟು ಪ್ರಮಾಣದ ದುಂದುವೆಚ್ಚ ಮಾಡುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್, ಉದ್ಯಾನವನ, ಕಸ ನಿರ್ವಹಣೆ ಮುಂತಾದವುಗಳನ್ನು ನಿರ್ವಹಿಸುವಲ್ಲಿ ನಿರಂತರವಾಗಿ ವಿಫಲವಾಗಿರುವ ಪಾಲಿಕೆ ಇಂತಹ ದುಂದುವೆಚ್ಚಕ್ಕೆ ಮುಂದಾಗಿರುವುದು ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದೆ.