ನೀತಿ ಸಂಹಿತೆ ಉಲ್ಲಂಘನೆ: ಶಾಸಕ ಪರಮೇಶ್ವರ್ ನಾಯಕ್ ವಿರುದ್ಧ ಪ್ರಕರಣದ 2ನೆ ಆರೋಪಿಗೆ ರಿಲೀಫ್

Update: 2019-10-04 18:17 GMT

ಬೆಂಗಳೂರು, ಅ.4: ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಹೂವಿನಹಡಗಲಿ ಕ್ಷೇತ್ರದ ಶಾಸಕ ಪಿ.ಟಿ.ಪರಮೇಶ್ವರ ನಾಯಕ್ ವಿರುದ್ಧದ ಪ್ರಕರಣದಲ್ಲಿ ಎರಡನೆ ಆರೋಪಿಯಾಗಿರುವ ತಿಪ್ಪಾರೆಡ್ಡಿ ಕೊಟ್ರಪ್ಪನಿಗೆ ನಗರದ ಜನಪ್ರತಿನಿಧಿಗಳ ಕೋರ್ಟ್ ಪ್ರಕರಣದಿಂದ ಖುಲಾಸೆಗೊಳಿಸಿ ಆದೇಶಿಸಿದೆ.

ಶಾಸಕ ಪಿ.ಟಿ.ಪರಮೇಶ್ವರ ನಾಯಕ್ ಹೈಕೋರ್ಟ್‌ಗೆ ಅರ್ಜಿ ಹಾಕಿ ಈ ಹಿಂದೆಯೇ ತಮಗೆ ಮಾತ್ರ ಪ್ರಕರಣದಿಂದ ರಿಲೀಫ್ ತೆಗೆದುಕೊಂಡಿದ್ದರು. ಆದರೆ, ಪ್ರಕರಣದಲ್ಲಿ 2ನೆ ಆರೋಪಿಯಾಗಿರುವ ತಿಪ್ಪಾರೆಡ್ಡಿ ಪ್ರಕರಣ ಹಾಗೆ ಇದ್ದ ಕಾರಣ ತಿಪ್ಪಾರೆಡ್ಡಿ(79) ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ತನ್ನ ಪಾತ್ರದ ಕುರಿತು ವಿವರ ನೀಡಿದ್ದರು. ಹೀಗಾಗಿ, ಶುಕ್ರವಾರ ಇಳಿವಯಸ್ಸಿನ ತಿಪ್ಪಾರೆಡ್ಡಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಕೋರ್ಟ್ ಆದೇಶ ನೀಡಿದೆ.

ಪ್ರಕರಣವೇನು: 2013ರಲ್ಲಿ ವಿಧಾನಸಭೆ ಚುನಾವಣೆಯ ಪ್ರಯುಕ್ತ ನೀತಿ ಸಂಹಿತೆ ಜಾರಿಯಲ್ಲಿದ್ದಾಗ, ಶಾಸಕ ಪಿ.ಟಿ.ಪರಮೇಶ್ವರ ನಾಯಕ್ ತನ್ನ ಬೆಂಬಲಿಗರಿಗೆ ಬನ್ನಿಕಲ್ ಗ್ರಾಮ ಪಂಚಾಯಿತಿಯ ಗದ್ದಿಕೆರೆ ಗ್ರಾಮದಲ್ಲಿ ಊಟೋಪಚಾರದ ವ್ಯವಸ್ಥೆ ಕಲ್ಪಿಸಿದ್ದರು. ತಿಪ್ಪಾರೆಡ್ಡಿ ಕೊಟ್ರಪ್ಪರವರ ತೋಟದಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ಆರೋಪಿಸಲಾಗಿತ್ತು. ಶಾಸಕರಿಗೆ ಸಹಾಯ ಮಾಡಿದ ಆರೋಪದಲ್ಲಿ ಇಳಿವಯಸ್ಸಿನ ವ್ಯಕ್ತಿಯ ಮೇಲೂ ತಂಬ್ರಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News