ಲೆಗೊ ಎಜು ಕಿಟ್ ವಿತರಣೆ
Update: 2019-10-04 23:49 IST
ಬೆಂಗಳೂರು, ಅ.4: ಮಕ್ಕಳ ವಯಸ್ಸು ಮತ್ತು ಅವರ ಬೌದ್ಧಿಕ ವಿಕಾಸಕ್ಕಾಗಿ ಲೆಗೊ ಎಜು ಕಿಟ್‌ಗಳನ್ನು (ವಿವಿಧ ರೀತಿ ಜೋಡಿಸಬಹುದಾದ ಪ್ಲಾಸ್ಟಿಕ್ ಆಟಿಕೆಗಳು) ಬಾಹ್ಯಾಕಾಶ ವಿಜ್ಞಾನಿ ಡಾ.ಪ್ರುಚೇತಾ ಎಸ್.ವಿ.ಮಲ್ಲಿಕ್ ವಿತರಣೆ ಮಾಡಿದರು.
ಶುಕ್ರವಾರ ಇಲ್ಲಿನ ಗಂಗಾನಗರದ ಬಿಬಿಎಂಪಿ ಪ್ರೌಢ ಶಾಲೆಯಲ್ಲಿ ಸ್ಯಾಪ್ (ಎಸ್‌ಎಪಿ) ಸಂಸ್ಥೆ ಆಯೋಜಿಸಿದ್ದ, ನೇರ ವಿಜ್ಞಾನ ಚಟುವಟಿಕೆಗಳ ಕಾರ್ಯಕ್ರಮದಲ್ಲಿ 8 ಮತ್ತು 9ನೆ ತರಗತಿಯ ವಿದ್ಯಾರ್ಥಿಗಳಿಗೆ ಲೆಗೊ ಎಜು ಕಿಟ್ ವಿತರಿಸಿದರು.
ಮಕ್ಕಳಲ್ಲಿ ವಿಜ್ಞಾನ, ಗಣಿತ ಹಾಗೂ ತಂತ್ರಜ್ಞಾನ ಕುರಿತ ಜ್ಞಾನ ಮುಖ್ಯವಾಗಿದ್ದು, ಈ ಲೆಗೊ ಎಜು ಕಿಟ್‌ಗಳು, ಮಕ್ಕಳು ಕಲಿಕಾಭ್ಯಾಸದಲ್ಲಿ ತೊಡಗಲು ಸಹಾಯ ಮಾಡಲಿವೆ ಎಂದು ಡಾ.ಪ್ರುಚೇತಾ ಎಸ್.ವಿ.ಮಲ್ಲಿಕ್ ನುಡಿದರು. ಈ ಸಂದರ್ಭದಲ್ಲಿ ಎಸ್‌ಎಪಿ ನಿರ್ದೇಶಕ ಪಿಯುಷ್ ಬಂಧು, ಅರುಧಂತಿ ಕೆ. ಸೇರಿದಂ ತೆ ಪ್ರಮುಖರು ಉಪಸ್ಥಿತರಿದ್ದರು.