ಜೈಪುರ, ಹರ್ಯಾಣಕ್ಕೆ ಜಯ

Update: 2019-10-05 02:28 GMT

ಪಂಚಕುಲ, ಅ.4: ದೀಪಕ್ ನರ್ವಾಲ್(14ಅಂಕ)ನೆರವಿನಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ವಿರುದ್ಧ ಶುಕ್ರವಾರ ನಡೆದ ಪ್ರೊ ಕಬಡ್ಡಿ ಲೀಗ್‌ನ 120ನೇ ಪಂದ್ಯದಲ್ಲಿ 41-34 ಅಂಕಗಳಿಂದ ಜಯ ಸಾಧಿಸಿದೆ.

ದೀಪಕ್‌ಗೆ ನೀಲೇಶ್ ಸಾಲುಂಕೆ(9ಅಂಕ) ಸಮರ್ಥ ಸಾಥ್ ನೀಡಿ ಜೈಪುರ ತಂಡ ಈ ವರ್ಷದ ಪ್ರೊ ಕಬಡ್ಡಿ ಲೀಗ್‌ನಲ್ಲಿ ಪ್ಲೇ-ಆಫ್‌ಗೇರುವ ಅಲ್ಪ ಅವಕಾಶವನ್ನು ಜೀವಂತವಾಗಿರಿಸಿದರು. ಬುಲ್ಸ್ ಪರ ಪವನ್‌ಕುಮಾರ್ 14 ಅಂಕ ಗಳಿಸಿದರು.

121ನೇ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಹರ್ಯಾಣ ಸ್ಟೀಲರ್ಸ್ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ತೆಲುಗು ಟೈಟಾನ್ಸ್ ತಂಡವನ್ನು 52-32 ಅಂತರದಿಂದ ಸುಲಭವಾಗಿ ಮಣಿಸಿತು. ಹರ್ಯಾಣದ ಪರ ವಿಕಾಸ್ 13 ಅಂಕ ಗಳಿಸಿದರೆ, ಪರಾಜಿತ ಟೈಟಾನ್ಸ್ ಪರ ಸಿದ್ದಾರ್ಥ್ ದೇಸಾಯಿ 12 ಅಂಕ ಕಲೆ ಹಾಕಿದರು. 21 ಪಂದ್ಯಗಳಲ್ಲಿ 13ನೇ ಜಯ ಸಾಧಿಸಿದ ಹರ್ಯಾಣ ಒಟ್ಟು 70 ಅಂಕಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News