100 ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯ ಆಡಿದ ಭಾರತದ ಮೊದಲ ಕ್ರಿಕೆಟ್ ತಾರೆ ಹರ್ಮನ್‌ಪ್ರೀತ್

Update: 2019-10-05 04:47 GMT

 ಸೂರತ್, ಅ.4: ಭಾರತದ ಚುಟುಕು ಮಾದರಿ ಕ್ರಿಕೆಟ್‌ನ ನಾಯಕಿ ಹರ್ಮನ್‌ಪ್ರೀತ್ ಕೌರ್ 100 ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನಾಡಿದ ಭಾರತದ ಮೊದಲ ಕ್ರಿಕೆಟ್ ತಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಶುಕ್ರವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಭಾರತದ ಪರ ತಲಾ 98 ಟಿ-20 ಪಂದ್ಯಗಳನ್ನಾಡಿರುವ ಎಂಎಸ್ ಧೋನಿ ಹಾಗೂ ರೋಹಿತ್ ಶರ್ಮಾಗಿಂತ ಮೊದಲೇ ಹರ್ಮನ್‌ಪ್ರೀತ್ ಈ ಮಹತ್ವದ ಸಾಧನೆ ಮಾಡಿದ್ದಾರೆ.

ಹರ್ಮನ್‌ಪ್ರೀತ್ 2009ರ ಜೂನ್‌ನಲ್ಲಿ ಟೌಂಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಟಿ-20 ಪಂದ್ಯ ಆಡಿದ್ದರು. ಆಲ್‌ರೌಂಡರ್ ಹರ್ಮನ್‌ಪ್ರೀತ್ ಟಿ-20 ಕ್ರಿಕೆಟ್‌ನಲ್ಲಿ ಈತನಕ 27 ವಿಕೆಟ್‌ಗಳು ಹಾಗೂ 2,003 ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News