ಬಿಸಿಯೂಟದ ಜೊತೆ ಮೊಟ್ಟೆ ಬದಲು ಮೊಳಕೆಕಾಳು ನೀಡಲು ಚಿಂತನೆ: ಸರಕಾರದ ಕ್ರಮಕ್ಕೆ ಸಾರ್ವಜನಿಕರ ಆಕ್ರೋಶ

Update: 2019-10-06 17:10 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.6: ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆ ಮೊಟ್ಟೆ ನೀಡುವ ಬದಲಿಗೆ ಮೊಳಕೆಕಾಳು ನೀಡಲು ಮುಂದಾಗಿರುವ ಸರಕಾರ ಚಿಂತನೆ ನಡೆಸಿದ್ದು, ಇದಕ್ಕೆ ಪೋಷಕರು ಹಾಗೂ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. 

ಮೊಟ್ಟೆ ನೀಡಬೇಕೆಂದು ಒಂದು ವರ್ಗ ಒತ್ತಾಯಿಸಿದರೆ, ಮತ್ತೊಂದು ವರ್ಗ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಸರಕಾರ ಮೊಳಕೆಕಾಳು ನೀಡಲು ಚಿಂತನೆ ನಡೆಸುತ್ತಿದೆ. ಮೊಟ್ಟೆ ಮತ್ತು ಮೊಳಕೆಕಾಳಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೋಷಕಾಂಶಗಳಿವೆ. ಬಿಸಿಯೂಟದಲ್ಲಿ ಮೊಳಕೆಕಾಳನ್ನು ನೀಡಿದರೆ ಮೊಟ್ಟೆ ನೀಡುವುದರಿಂದ ಎದುರಾಗಬಹುದಾದ ವಿವಾದವನ್ನು ಬಗೆಹರಿಸಲು ಸಾಧ್ಯವೆಂದು ಶಿಕ್ಷಣ ಇಲಾಖೆಯ ಅಧಿಕಾರಿಗಳ ಅಭಿಪ್ರಾಯವಾಗಿದೆ.

ಮೊಳಕೆಕಾಳು ನೀಡುವ ಸರಕಾರದ ಚಿಂತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಮೊಟ್ಟೆ ಬದಲಿಗೆ ಮೊಟ್ಟೆಯೇ ಹೊರತು, ಮೊಳಕೆಕಾಳು, ಸಿರಿಧಾನ್ಯಗಳಾಗಲಿ, ಪರಿಮಳಭರಿತ ಹಾಲಲ್ಲ. ಈ ಬಗ್ಗೆ ಸರಕಾರ ಮರು ಚಿಂತನೆ ನಡೆಸಬೇಕೆಂದು ಲೇಖಕ ಕಾರ್ಪೆಂಟರ್ ಒತ್ತಾಯಿಸಿದ್ದಾರೆ.

ರಾಜ್ಯ ಸರಕಾರ ಮಕ್ಕಳಿಗೆ ಕೊಡುವ ಆಹಾರದಲ್ಲಿ ರಾಜಕೀಯ ಮಾಡುತ್ತಿದೆ. ಮಕ್ಕಳಿಗೆ ದಿನಕ್ಕೊಂದು ಮೊಟ್ಟೆ ನೀಡುವಂತೆ ವೈದ್ಯರೇ ಸಲಹೆ ನೀಡುತ್ತಾರೆ. ಆದರೆ, ನಮ್ಮ ಜನಪ್ರತಿನಿಧಿಗಳು ಮಕ್ಕಳ ಆರೋಗ್ಯಕ್ಕಿಂತ ತಮ್ಮ ಸ್ವಹಿತಾಸಕ್ತಿಗಳೇ ಮುಖ್ಯವಾಗುತ್ತದೆ ಎಂದು ಸಾರ್ವಜನಿಕರು ಸರಕಾರದ ಕ್ರಮವನ್ನು ಬಲವಾಗಿ ವಿರೋಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News