ಆಯುಧಪೂಜೆ: ಬೆಂಗಳೂರಿನಲ್ಲಿ ಸ್ವಚ್ಛತೆ ಕಾಪಾಡಲು ಆಯುಕ್ತರ ಮನವಿ

Update: 2019-10-06 17:15 GMT

ಬೆಂಗಳೂರು, ಅ.6: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಆಯುಧಪೂಜೆ ನಿಮಿತ್ತ ಆದಷ್ಟು ಸ್ವಚ್ಛತೆ ಕಾಪಾಡಲು ಮುಂದಾಗಬೇಕು ಎಂದು ಆಯುಕ್ತ ಅನಿಲ್ ಕುಮಾರ್ ಮನವಿ ಮಾಡಿದ್ದಾರೆ.

ಸಾರ್ವಜನಿಕರು ಆಯುಧ ಪೂಜೆ ಹಬ್ಬದ ಪ್ರಯುಕ್ತ ಮನೆ, ಅಂಗಡಿ, ಕಾರ್ಖಾನೆ, ಕಛೇರಿಗಳ ದ್ವಾರದಲ್ಲಿ ಬಾಳೆ ಕಂಬ ಕಟ್ಟುವುದು, ವಾಹನಗಳಿಗೆ ಹೂವಿನ ಅಲಂಕಾರ ಮಾಡುವುದು ಹಾಗೂ ಮುಂಭಾಗ ಪೂಜೆಗೆ ಬಳಸುವ ಕುಂಬಳ ಕಾಯಿ, ನಿಂಬೇಹಣ್ಣು ಹಾಗೂ ತೆಂಗಿನಕಾು ಹೊಡೆಯುವುದು ವಾಡಿಕೆ. ಆದರೆ, ಹಬ್ಬ ಆಚರಣೆ ಜತೆಗೆ ಸ್ವಚ್ಛತೆ ಕಾಪಾಡಬೇಕು.

ಹಬ್ಬವನ್ನು ಆಚರಣೆ ಮಾಡಿದ ಬಳಿಕ ಮನೆಯ ಮುಂದೆ ಹಾಗೂ ರಸ್ತೆ ಮೇಲೆ ಹರಡಿರುವ ಕಸವನ್ನು ವಿಂಗಡಿಸಿ, ಪಾಲಿಕೆ ಆಟೋ, ತಳ್ಳುವ ಗಾಡಿಗಳಿಗೆ ನೀಡಬೇಕು. ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯವು ರಸ್ತೆ, ಚರಂಡಿಗಳಲ್ಲಿ ತುಂಬಿಕೊಂಡು ಮಳೆ ನೀರು ಸರಾಗವಾಗಿ ಹರಿಯಲು ಅಡಚಣೆಯುಂಟಾಗುತ್ತದೆ. ಇದರಿಂದ ಪರಿಸರ ಮಾಲಿನ್ಯ ಮತ್ತು ಹಲವು ಪತ್ತುಗಳಿಗೆ ಕಾರಣವಾಗುತ್ತದೆ.

ಹಬ್ಬದ ಹಿನ್ನೆಲೆಯಲ್ಲಿ ರಸ್ತೆ ಅಥವಾ ಮನೆ, ಕಚೇರಿ, ಅಂಗಡಿಗಳ ಮುಂಭಾಗ ಕಸವನ್ನು ಹರಡಿರುವುದು ಕಂಡು ಬಂದರೆ ಅವರಿಗೆ ದಂಡ ವಿಧಿಸಲಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಹಬ್ಬವನ್ನು ಸಂಭ್ರಮದಿಂದ ಆಚರಿಸುವುದರ ಜೊತೆಗೆ ನಗರದ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡಲು ಪಾಲಿಕೆಯೊಂದಿಗೆ ಸಹಕರಿಸಬೇಕು ಎಂದು ಆಯುಕ್ತರು ಪ್ರಕಟನೆಯಲ್ಲಿ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News