ಮುಹಮ್ಮದ್ ಶಮಿ ಬೌಲಿಂಗ್ ಬಗ್ಗೆ ಅಖ್ತರ್ ಪ್ರತಿಕ್ರಿಯಿಸಿದ್ದು ಹೀಗೆ...

Update: 2019-10-08 12:30 GMT

ಲಂಡನ್ , ಅ.8: ಇಂಗ್ಲೆಂಡ್‌ನಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ ನಂತರ ಭಾರತದ ವೇಗಿ ಮೊಹಮ್ಮದ್ ಶಮಿ ಅವರು ತಮ್ಮನ್ನು ಸಂಪರ್ಕಿಸಿ ವೇಗದ ಬೌಲಿಂಗ್ ಬಗ್ಗೆ ಸಲಹೆ ಪಡೆದಿದ್ದಾರೆ ಎಂದು ಪಾಕ್ ನ ಮಾಜಿ ವೇಗಿ ಶುಐಬ್ ಅಖ್ತರ್ ಬಹಿರಂಗಪಡಿಸಿದ್ದಾರೆ.

ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಶುಐಬ್ ಅಖ್ತರ್ ಅವರು  ಭಾರತೀಯ ಬೌಲರ್‌ಗಳು ಸಲಹೆ ಪಡೆಯಲು ಕರೆ ಮಾಡುತ್ತಾರೆ ಆದರೆ ಪಾಕಿಸ್ತಾನಿಗಳು ಹಾಗೆ ಮಾಡುವುದಿಲ್ಲ

 ಕಳೆದ ಟೆಸ್ಟ್ನಲ್ಲಿ ಶಮಿ ಅವರ ಸಾಧನೆಗಾಗಿ ಅಖ್ತರ್ ಅಭಿನಂದಿಸಿದರು ಮತ್ತು ಭಾರತವು ನಂ .1 ಸ್ಥಾನಕ್ಕೆ ಅರ್ಹವಾಗಿದೆ ಎಂದು ಹೇಳಿದರು

ವೇಗದ ಬೌಲಿಂಗ್ ದಂತಕಥೆ ಅಖ್ತರ್ ಅವರು ಪಾಕಿಸ್ತಾನದ ವೇಗಿಗಳು ಅವರಿಂದ ಅಥವಾ ಯಾವುದೇ ನಿವೃತ್ತ ಶ್ರೇಷ್ಠ ಕ್ರಿಕೆಟಿಗರಿಂದ ಯಾವುದೇ ಸಲಹೆಯನ್ನು ಪಡೆಯುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವಿಶಾಖಪಟ್ಟಣ  ಟೆಸ್ಟ್‌ನಲ್ಲಿ ಮುಹಮ್ಮದ್ ಶಮಿ ಅವರ ಅದ್ಭುತ ಪ್ರದರ್ಶನಕ್ಕಾಗಿ ಅಭಿನಂದನೆ ಸಲ್ಲಿಸಿದರು ಮತ್ತು ಇಂಗ್ಲೆಂಡ್‌ನಲ್ಲಿ ನಡೆದ 50 ಓವರ್‌ಗಳ ವಿಶ್ವಕಪ್ ನಂತರ ತಮ್ಮ ವೇಗದ ಬೌಲಿಂಗ್ ಕುರಿತು ಸಲಹೆ ಪಡೆಯಲು ಭಾರತೀಯ ವೇಗಿ ಅವರಿಗೆ ಕರೆ ಮಾಡಿದ್ದಾರೆ ಎಂದು ಬಹಿರಂಗಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News