10 ದಿನಗಳಲ್ಲಿ ಸೌದಿಗೆ 24,000 ಪ್ರವಾಸಿಗರು

Update: 2019-10-08 18:35 GMT

ರಿಯಾದ್, ಅ. 8: ಸೌದಿ ಅರೇಬಿಯದ ವಿಮಾನ ನಿಲ್ದಾಣಗಳಲ್ಲಿ ಪ್ರವಾಸಿ ವೀಸಾಗಳನ್ನು ನೀಡುವ ನೀತಿ ಜಾರಿಗೆ ಬಂದ ಮೊದಲ 10 ದಿನಗಳಲ್ಲಿ ದೇಶವನ್ನು 24,000 ವಿದೇಶಿ ಪ್ರವಾಸಿಗರು ಪ್ರವೇಶಿಸಿದ್ದಾರೆ ಎಂದು ಸೌದಿ ಅರೇಬಿಯದ ವಿದೇಶ ಸಚಿವಾಲಯದ ಹೇಳಿಕೆಯೊಂದು ಸೋಮವಾರ ತಿಳಿಸಿದೆ.

ನೂತನ ವ್ಯವಸ್ಥೆ ಜಾರಿಗೆ ಬಳಿಕ, 10 ದೇಶಗಳಿಂದ ಬಂದ ಪ್ರವಾಸಿಗರ ಸಂಖ್ಯೆ ಇದಾಗಿದೆ. 10 ದೇಶಗಳ ಪಟ್ಟಿಯಲ್ಲಿ ಚೀನಾ ಅಗ್ರಸ್ಥಾನದಲ್ಲಿದ್ದರೆ, ಬ್ರಿಟನ್ ಮತ್ತು ಅಮೆರಿಕ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಗಳಲ್ಲಿವೆ.

ಪಟ್ಟಿಯಲ್ಲಿರುವ ಇತರ ದೇಶಗಳೆಂದರೆ ಫ್ರಾನ್ಸ್, ಜರ್ಮನಿ, ಕೆನಡ, ಮಲೇಶ್ಯ, ರಶ್ಯ, ಆಸ್ಟ್ರೇಲಿಯ ಮತ್ತು ಕಝಖ್‌ಸ್ತಾನ್.

ನೂತನ ವೀಸಾ ವ್ಯವಸ್ಥೆಯಲ್ಲಿ, ಹಜ್ ಋತುವಿಗೆ ಹೊರತಾದ ಅವಧಿಯಲ್ಲಿ ಪ್ರಾಯೋಜಕರ ಅಗತ್ಯವಿಲ್ಲದೆ ಮುಸ್ಲಿಮರು ಸುಲಭವಾಗಿ ಉಮ್ರಾ ನಿರ್ವಹಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News