ಮುಂಬೈನಲ್ಲಿ ಸಹಾಯಾರ್ಥ ಫುಟ್ಬಾಲ್ ಪಂದ್ಯ ಆಡಿದ ಧೋನಿ, ಪೇಸ್

Update: 2019-10-09 01:55 GMT

ಮುಂಬೈ, ಅ.8: ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್‌ರೊಂದಿಗೆ ಭಾರತದ ಸ್ಟಾರ್ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಮುಂಬೈನಲ್ಲಿ ಸೋಮವಾರ ಸಹಾಯಾರ್ಥ ಫುಟ್ಬಾಲ್ ಪಂದ್ಯ ಆಡಿದ್ದಾರೆ.

   ‘ಕ್ಯಾಪ್ಟನ್ ಕೂಲ್’ ಧೋನಿ ಹಾಗೂ ಇತರ ಕೆಲವು ಕ್ರಿಕೆಟಿಗರು ಪೇಸ್ ಜೊತೆ ಫುಟ್ಬಾಲ್ ಪಂದ್ಯ ಆಡಿದ್ದಾರೆ ಎಂದು ಧೋನಿ ಹಾಗೂ ಪೇಸ್ ಅವರ ಮ್ಯಾನೇಜ್‌ಮೆಂಟ್ ಕಂಪೆನಿ ರ್ಹಿಟಿ ಸ್ಪೋರ್ಟ್ಸ್ ಫೇಸ್‌ಬುಕ್‌ನಲ್ಲಿ ಫೋಟೊ ಪೋಸ್ಟ್ ಮಾಡಿದೆ. ಧೋನಿ ಕ್ರಿಕೆಟ್‌ನಿಂದ ದೀರ್ಘ ವಿಶ್ರಾಂತಿ ಪಡೆದಿದ್ದು, ಜುಲೈನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪರ ಕೊನೆಯ ಬಾರಿ ಏಕದಿನ ಪಂದ್ಯ ಆಡಿದ್ದರು. ಎರಡು ತಿಂಗಳ ವಿಶ್ರಾಂತಿ ಪಡೆದಿದ್ದ ಧೋನಿ ವೆಸ್ಟ್‌ಇಂಡೀಸ್ ಪ್ರವಾಸದಿಂದ ದೂರ ಉಳಿದಿದ್ದರು. ಡಿಸೆಂಬರ್‌ನಲ್ಲಿ ಭಾರತಕ್ಕೆ ಮತ್ತೆ ಆಗಮಿಸಲಿರುವ ವಿಂಡೀಸ್ ವಿರುದ್ಧ ಆಡುವ ಸಾಧ್ಯತೆಯಿದೆ.

ಆದರೆ, ಇತ್ತೀಚೆಗಿನ ವರದಿಯ ಪ್ರಕಾರ ಧೋನಿ ತನ್ನ ವಿರಾಮವನ್ನು ವಿಸ್ತರಿಸಿಕೊಳ್ಳುವ ಸಾಧ್ಯತೆಯಿದ್ದು, ಬಾಂಗ್ಲಾದೇಶ ವಿರುದ್ಧ ಸ್ವದೇಶದಲ್ಲಿ ನಡೆಯುವ ಟಿ-20 ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News