ಕ್ರಿಸ್ ಸಿಲ್ವರ್‌ವುಡ್ ಇಂಗ್ಲೆಂಡ್ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕ

Update: 2019-10-09 01:57 GMT

ಲಂಡನ್ , ಅ.8: ಕ್ರಿಸ್ ಸಿಲ್ವರ್‌ವುಡ್ ಅವರನ್ನು ಇಂಗ್ಲೆಂಡ್‌ನ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ ಎಂದು ಇಸಿಬಿ ಸೋಮವಾರ ಪ್ರಕಟಿಸಿದೆ.

ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗುವ ನ್ಯೂಝಿಲೆಂಡ್ ಪ್ರವಾಸದಿಂದಲೇ ಸಿಲ್ವರ್‌ವುಡ್ ಇಂಗ್ಲೆಂಡ್‌ನ ಪ್ರಧಾನ ಕೋಚ್ ಆಗಿ ಜವಾಬ್ದಾರಿಯನ್ನು ವಹಿಸಿಕೊಳ್ಳಲಿವರು.

 ‘‘ಕ್ರಿಸ್ ಸಿಲ್ವರ್‌ವುಡ್ ಅವರನ್ನು ಇಂಗ್ಲೆಂಡ್ ಪುರುಷರ ಮುಖ್ಯ ಕೋಚ್ ಆಗಿ ನೇಮಕ ಮಾಡಲು ನಾವು ಸಂತೋಷಪಡುತ್ತೇವೆ. ನಾವು ಸಂಪೂರ್ಣ ಪ್ರಕ್ರಿಯೆಯ ಮೂಲಕ ಹೋಗಿದ್ದೇವೆ ಮತ್ತು ನಮಗೆ ಲಭ್ಯವಿರುವ ಎಲ್ಲಾ ಆಯ್ಕೆಗಳನ್ನು ನೋಡಿದ್ದೇವೆ. ಕ್ರಿಸ್ ಈ ಸ್ಥಾನಕ್ಕೆ ಸಮರ್ಥ ಅಭ್ಯರ್ಥಿಯಾಗಿದ್ದರು’’ ಎಂದು ಇಸಿಬಿ ಹೇಳಿಕೆಯಲ್ಲಿ ತಿಳಿಸಿದೆ.

ಭಾರತದ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್, ಗ್ರಹಾಂ ಫೋರ್ಡ್ ಮತ್ತು ಅಲೆಕ್ ಸ್ಟೀವರ್ಟ್ ಕೋಚ್ ಹುದ್ದೆಗೆ ಆಕಾಂಕ್ಷಿಯಾಗಿ ಕಣದಲ್ಲಿದ್ದರು.

‘‘ಇಂಗ್ಲೆಂಡ್ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದಕ್ಕೆ ನನಗೆ ಸಂತಸವಾಗಿದೆ ಮತ್ತು ಇದು ನನಗೆ ದೊರೆತ ಗೌರವ ಎಂದು ಭಾವಿಸುವೆನು’’ ಎಂದು 44ರ ಹರೆಯದ ಮಾಜಿ ಮಧ್ಯಮ ವೇಗಿ ಕ್ರಿಸ್ ಹೇಳಿದ್ದಾರೆ. ‘‘ಕಳೆದ ಐದು ವರ್ಷಗಳಲ್ಲಿ ಮಾಡಿದ ಮಹತ್ತರ ಕಾರ್ಯವನ್ನು ಮುಂದುವರಿಸಲು ಮತ್ತು ತಂಡದ ಭವಿಷ್ಯವನ್ನು, ವಿಶೇಷವಾಗಿ ಟೆಸ್ಟ್ ರಂಗದಲ್ಲಿ ಇನ್ನಷ್ಟು ಉತ್ತಮಪಡಿಸಲು ನಾನು ಗುರಿ ಹೊಂದಿದ್ದೇನೆ’’ಎಂದು ಅವರು ಹೇಳಿದರು.

ಸಿಲ್ವರ್‌ವುಡ್ 1996 ರಿಂದ 2002 ರವರೆಗೆ ತಮ್ಮ ವೃತ್ತಿಜೀವನದಲ್ಲಿ ಆರು ಟೆಸ್ಟ್ ಮತ್ತು ಏಳು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಸಿಲ್ವರ್‌ವುಡ್ ನಾಯಕತ್ವದಲ್ಲಿ ಎಸೆಕ್ಸ್ ತಮ್ಮ ಚಾಂಪಿಯನ್‌ಶಿಪ್ ಬರವನ್ನು ಕೊನೆಗೊಳಿಸಿತು ಮತ್ತು 2017 ರಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News