ಶಿವ ಥಾಪಾ, ಸಚಿನ್ ಪೈನಲ್‌ಗೆ

Update: 2019-10-09 18:56 GMT

ಹೊಸದಿಲ್ಲಿ, ಅ.9: ಈಗ ನಡೆಯುತ್ತಿರುವ 4ನೇ ಆವೃತ್ತಿಯ ಪುರುಷರ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಶಿವ ಥಾಪಾ(63ಕೆಜಿ) ಹಾಗೂ ಸಚಿನ್ ಸಿವಾಚ್(57ಕೆಜಿ)ಫೈನಲ್ ತಲುಪಿದ್ದಾರೆ.

 20 ಬಾಕ್ಸಿಂಗ್ ಸ್ಪರ್ಧೆಗಳನ್ನು ಆಡಲಾಗಿದ್ದು, ಸರ್ವಿಸಸ್‌ನ 8 ಹಾಗೂ ರೈಲ್ವೇಸ್‌ನ ಐವರು ಬಾಕ್ಸರ್‌ಗಳು ಫೈನಲ್ ತಲುಪಿದ್ದಾರೆ. ಗೆಲುವಿನ ಓಟ ಮುಂದುವರಿಸಿದ ರೈಲ್ವೇಸ್‌ನ ಸಚಿನ್ ಪಂಜಾಬ್‌ನ ಸಾಗರ್ ಚಂದ್‌ರನ್ನು 5-0 ಅಂತರದಿಂದ ಸೋಲಿಸಿದರು. ಅಸ್ಸಾಂನ ಶಿವ ಕಳೆದ ವರ್ಷ ಬೆಳ್ಳಿ ಜಯಿಸಿದ್ದ ಅಭಿಷೇಕ್ ಯಾದವ್ ವಿರುದ್ಧ ಒಮ್ಮತದಿಂದ ಜಯ ಸಾಧಿಸಿದರು. ಇಂಡಿಯಾ ಓಪನ್‌ನಲ್ಲಿ ಬೆಳ್ಳಿ ಪದಕ ವಿಜೇತ ಸಚಿನ್ ನಿಧಾನವಾಗಿ ಆರಂಭ ಪಡೆದರೂ, ಮೊದಲ ಸುತ್ತಿನ ಅಂತ್ಯಕ್ಕೆ ಹೆಚ್ಚು ಆಕ್ರಮಣಕಾರಿಯಾಗಿ ಆಡಿದರು. ಶಿವ ಮುಂದಿನ ಸುತ್ತಿನಲ್ಲಿ ಸರ್ವಿಸಸ್‌ನ ಆಕಾಶ್‌ರನ್ನು ಎದುರಿಸಲಿದ್ದಾರೆ. ಆಕಾಶ್ ಪ್ರೆಸಿಡೆಂಟ್ ಕಪ್ ಚಾಂಪಿಯನ್ ಅಂಕುಶ್ ದಹಿಯಾರನ್ನು 3-2 ಅಂತರದಿಂದ ಮಣಿಸಿದರು.

ಸಚಿನ್ ಗುರುವಾರ ನಡೆಯಲಿರುವ ಫೈನಲ್‌ನಲ್ಲಿ ಮುಹಮ್ಮದ್ ಹಸ್ಸಮುದ್ದೀನ್‌ರನ್ನು ಎದುರಿಸಲಿದ್ದಾರೆ. ಹಸ್ಸಮುದ್ದೀನ್ ರಾಜಸ್ಥಾನದ ರೋಶನ್ ಸಿಂಗ್ ವಿರುದ್ಧ 5-0 ಅಂತರದಿಂದ ಜಯ ಸಾಧಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News