ಎರಡನೇ ಟೆಸ್ಟ್: ಭಾರತ ಬ್ಯಾಟಿಂಗ್ ಆಯ್ಕೆ

Update: 2019-10-10 04:53 GMT

ಪುಣೆ, ಅ.10: ದಕ್ಷಿಣ ಆಫ್ರಿಕಾ ವಿರುದ್ಧ ಗುರುವಾರ ಇಲ್ಲಿ ಆರಂಭವಾದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಜಯಿಸಿದ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.

ರೋಹಿತ್ ಶರ್ಮಾ ಅವರು ಮಾಯಾಂಕ್ ಅಗರ್ವಾಲ್ ಜೊತೆ ಇನಿಂಗ್ಸ್ ಆರಂಭಿಸಿದ್ದಾರೆ. ಮೊದಲ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ್ದ ರೋಹಿತ್ ಇನಿಂಗ್ಸ್‌ನ 10ನೇ ಓವರ್‌ನಲ್ಲಿ ಕೇವಲ 14 ರನ್ ಗಳಿಸಿ ವೇಗಿ ರಬಾಡರಿಗೆ ವಿಕೆಟ್ ಒಪ್ಪಿಸಿದ್ದಾರೆ. ಆಗ ಭಾರತದ ಸ್ಕೋರ್ 25 ರನ್.

ಉಭಯ ತಂಡಗಳು ತಲಾ ಒಂದು ಬದಲಾವಣೆ ಮಾಡಿವೆ. ಭಾರತ ತಂಡ ಆಲ್‌ರೌಂಡರ್ ಹನುಮ ವಿಹಾರಿ ಬದಲಿಗೆ ವೇಗದ ಬೌಲರ್ ಉಮೇಶ್ ಯಾದವ್‌ರನ್ನು ಕಣಕ್ಕಿಳಿಸಿದರೆ, ದಕ್ಷಿಣ ಆಫ್ರಿಕಾ ಪೀಟ್ ಬದಲಿಗೆ ಅನ್ರಿಚ್ ನೊರ್ಟ್ಜೆ ಅವರನ್ನು ಕಣಕ್ಕಿಳಿಸಿದೆ. ಎರಡೂ ತಂಡಗಳು ಹೆಚ್ಚುವರಿ ವೇಗದ ಬೌಲರ್‌ಗೆ ಆದ್ಯತೆ ನೀಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News