ನಿಮ್ಮ ರಾಷ್ಟ್ರವಾದ ಹಿಟ್ಲರ್, ಮುಸ್ಸೊಲಿನಿಯಿಂದ ಪ್ರೇರಿತವಾಗಿದೆಯೇ: ಮೋಹನ್ ಭಾಗವತ್ ಗೆ ಛತ್ತೀಸ್ ಗಢ ಸಿಎಂ ಪ್ರಶ್ನೆ

Update: 2019-10-10 09:40 GMT

ರಾಯಪುರ್, ಅ.10: ಗುಂಪು ಥಳಿತ  ಕುರಿತಂತೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ನೀಡಿದ ಹೇಳಿಕೆಯ ವಿರುದ್ಧ ಕಿಡಿಕಾರಿರುವ ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ಭಾಗವತ್ ಅವರು ಹಿಟ್ಲರ್ ಅಥವಾ ಮುಸ್ಸೊಲಿನಿಯಿಂದ ಪ್ರಭಾವಿತರಾಗಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

"ಭಾಗವತ್ ಅವರ ರಾಷ್ಟ್ರವಾದದ ಪರಿಕಲ್ಪನೆ  ಹಿಟ್ಲರ್ ಅಥವಾ ಮುಸ್ಸೊಲಿನಿಯಿಂದ ಪ್ರೇರಣೆ ಪಡೆದಿದೆಯೇ ಎಂದು ನಾನು ಅವರನ್ನು ಕೇಳ ಬಯಸುತ್ತೇನೆ. ನಿಮ್ಮ ವಾದಕ್ಕೆ ಅಸಮ್ಮತಿ ಸೂಚಿಸುವ ಎಲ್ಲರನ್ನೂ  ಹೊರ ಹೋಗಲು ಹೇಳುತ್ತೀರಾ?, ಇದು ಮಹಾತ್ಮ ಗಾಂಧಿಯವರ ಸರ್ವರನ್ನೊಳಗೊಂಡ ರಾಷ್ಟ್ರವಾದವಲ್ಲ'' ಎಂದು ರಾಯಪುರ್‍ ನಲ್ಲಿ ಕೆಲ ಪತ್ರಕರ್ತರ ಜತೆ ಮಾತನಾಡುತ್ತಾ ಬಾಘೇಲ್ ಹೇಳಿದರು.

ಭೂಪೇಶ್ ಬಾಘೇಲ್ ಅವರು ಆರೆಸ್ಸೆಸ್ ವಿರುದ್ಧ ಕಿಡಿಕಾರಿರುವುದು ಇದು ಮೊದಲ ಬಾರಿಯೇನಲ್ಲ. "ಕೆಲ ಜನರು ಕೇವಲ ಪ್ರಚಾರಕ್ಕಾಗಿ ಮಹಾತ್ಮ ಗಾಂಧಿಯನ್ನು ನೆನಪಿಸಿಕೊಳ್ಳುತ್ತಾರೆಯೇ ಹೊರತು ಅವರ ಮೌಲ್ಯಗಳ ಮೇಲೆ ನಂಬಿಕೆಯಿರಿಸಿಲ್ಲ ಹಾಗೂ ನಾಥೂರಾಂ ಗೋಡ್ಸೆಯನ್ನು ಖಂಡಿಸಲು ಧೈರ್ಯ ಹೊಂದಿಲ್ಲ'' ಎಂದು  ಅವರು ಈ ಹಿಂದೆ ಹೇಳಿದ್ದರು.

ವಿನಾಯಕ್ ದಾಮೋದರ್ ಸಾವರ್ಕರ್ ಆವರು ಗಾಂಧಿ ಹತ್ಯೆಯ ಸಂಚಿನ ಭಾಗವಾಗಿದ್ದರು ಎಂದು  ಕಳೆದ ವಾರ ಎರಡು ದಿನಗಳ ವಿಶೇಷ ವಿಧಾನಸಭಾ ಅಧಿವೇಶನದ ಸಂದರ್ಭ ಬಾಘೇಲ್ ಹೇಳಿದ್ದರು.

ಗಾಂಧೀಜಿಯ ಸಂದೇಶಗಳನ್ನು ಪಸರಿಸಲು ಛತ್ತೀಸಗಢ ಸಿಎಂ ಒಂದು ವಾರದ ಗಾಂಧಿ ವಿಚಾರ್ ಪಾದಯಾತ್ರೆಯಲ್ಲಿದ್ದು, ಇಂದು ಅವರ ಯಾತ್ರೆ ಕೊನೆಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News