ರಾಜ್ಯಗಳಲ್ಲಿ ಸಿಎಪಿಎಫ್ ಪಡೆಗಳ ನಿಯೋಜನೆ ಶುಲ್ಕ ಇಳಿಕೆ

Update: 2019-10-11 17:31 GMT

ಹೊಸದಿಲ್ಲಿ, ಅ.11: ಕೋಮು ಉದ್ವಿಗ್ನತೆ ಹಾಗೂ ಬಂಡುಕೋರ ಸಂಬಂಧಿತ ಹಿಂಸಾಚಾರ ನಿಗ್ರಹ ಸೇರಿದಂತೆ ಕಾನೂನು ಮತ್ತು ಶಿಸ್ತುಪಾಲನೆಯ ಕರ್ತವ್ಯಗಳಿಗೆ ಕೇಂದ್ರೀಯ ಸಶಸ್ತ್ರ ಪಡೆಗಳನ್ನು (ಸಿಎಪಿಎಫ್) ವಿವಿಧ ರಾಜ್ಯಗಳಲ್ಲಿ ನಿಯೋಜಿಸುವುದನ್ನು ಕೇಂದ್ರ ಸರಕಾರವು ಗಣನೀಯವಾಗಿ ಕಡಿಮೆಗೊಳಿಸಿದೆಯೆಂದು ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ತಿಳಿಸಿದೆ.

 ಸಿಎಪಿಎಫ್ ಪಡೆಗಳ ನಿಯೋಜನೆಗೆ ರಾಜ್ಯಸರಕಾರಗಳ ಪಾವತಿಸಬೇಕಾದ ಹಣವನ್ನು ಪರಿಷ್ಕರಿಸಲಾಗಿದೆ. ಆ ಪ್ರಕಾರ ಸಾಮಾನ್ಯ ಶ್ರೇಣಿಯ ರಾಜ್ಯವು 2019-20ನೇ ಸಾಲಿನ ಹಣಕಾಸು ವರ್ಷದಲ್ಲಿ ಸಿಎಪಿಎಫ್‌ನ 7 ತುಕಡಿಗಳನ್ನು ನಿಯೋಜಿಸಬೇಕಾದರೆ ಅದು ಕೇಂದ್ರಕ್ಕೆ ಪಡೆಗಳ ಸಂಚಾರ ಹಾಗೂ ಸಾಗಾಟ ವೆಚ್ಚ ಗಳನ್ನು ಹೊರತುಪಡಿಸಿ ವಾರ್ಷಿಕವಾಗಿ 13.7 ಕೋಟಿ ರೂ. ಪಾವತಿಸಬೇಕಾಗುತ್ತದೆ. 2018-19ನೇ ಸಾಲಿನಲ್ಲಿ 52.40 ರೂ. ಶುಲ್ಕವನ್ನು ವಿಧಿಸಲಾಗಿತ್ತು.

 ಇಷ್ಟೇ ಸಂಖ್ಯೆಯ ಸಿಎಪಿಎಫ್ ಪಡೆಗಳನ್ನು ಸಾಮಾನ್ಯ ಶ್ರೇಣಿಯ ರಾಜ್ಯಗಳಿಗೆ ನಿಯೋಜಿಸಲು 2020-21, 2021-22, 2022-23 ಅವಧಿಗಳಲ್ಲಿ ಕ್ರಮವಾಗಿ 15.40 ಕೋಟಿ ರೂ., 17.36 ಕೋಟಿ ರೂ., 19.5 ಕೋಟಿ ರೂ. ಹಾಗೂ 22.30 ಕೋಟಿ ರೂ. ಶುಲ್ಕ ವಿಧಿಸಲಾಗುವುದು ಎಂದು ಗೃಹ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News