ಕ್ಸಿ ಭೇಟಿಗೆ ಮಾಮಲ್ಲಾಪುರಂ ಆಯ್ಕೆ ಮಾಡಿದ್ದು ಮೋದಿಯಲ್ಲ, ಚೀನಾ?

Update: 2019-10-12 06:52 GMT

'ಮಾಮಲ್ಲಾಪುರಂ ಅನ್ನು ಆಯ್ಕೆ ಮಾಡಿದ್ದು ಮೋದಿಯಲ್ಲ, ಚೀನಾ' ಎಂದು ವರದಿ ಪ್ರಕಟಿಸಿದ್ದ ಟೈಮ್ಸ್ ಆಫ್ ಇಂಡಿಯಾ ನಂತರ 'ಮಾಹಿತಿಯ ಕೊರತೆ'ಯ ಕಾರಣ ಈ ವರದಿಯನ್ನು ಡಿಲಿಟ್ ಮಾಡಿದೆ.

ಟೈಮ್ಸ್ ಆಫ್ ಇಂಡಿಯಾದ ಚೆನ್ನೈ ಆವೃತ್ತಿಯಲ್ಲಿ ಅಕ್ಟೋಬರ್ 10ರಂದು ಈ ವರದಿ ಪ್ರಕಟಗೊಂಡಿತ್ತು. 2 ತಿಂಗಳ ಹಿಂದೆ ಚೀನಾ ತಜ್ಞರ ಸಭೆಯೊಂದು ನಡೆದಿತ್ತು. ಅದರಲ್ಲಿ ಚೀನಾದ ರಾಯಭಾರಿ ಲುಯೋ ಝಹುಯ್ ಭಾಗವಹಿಸಿದ್ದರು ಎಂದು ವರದಿ ತಿಳಿಸಿತ್ತು.

ಮಾಮಲ್ಲಾಪುರಂನನ್ನು ಮೋದಿ-ಕ್ಸಿ ಭೇಟಿಗೆ ಆಯ್ಕೆ ಮಾಡಿದ್ದು ಝಹುಯ್. ಚೀನಾದ ಚಿಂತಕ ಕ್ಸು ಫಾಂಚೆಂಗ್ ರ ಶಿಷ್ಯನಾಗಿದ್ದ ಝಹುಯ್ ಮಾಮಲ್ಲಾಪುರಂನ ಚಾರಿತ್ರಿಕ ಮಹತ್ವವನ್ನು ಮತ್ತು ಈ ನಗರಕ್ಕೆ ಚೀನಾದ ಜೊತೆಗಿದ್ದ ಸಂಬಂಧವನ್ನು ಅರಿತಿದ್ದರು. ಇದೇ ಸಭೆಯಲ್ಲಿ ಈಗಿನ ರಾಯಭಾರಿ ಸುನ್ ವೀಡೋಂಗ್ ಕೂಡ ಭಾಗವಹಿಸಿದ್ದರು. ಹೀಗಾಗಿ ಚೀನಾ ಮಾಮಲ್ಲಾಪುರಂನನ್ನು ಆಯ್ಕೆ ಮಾಡಿತ್ತು" ಎಂದು ವರದಿ ತಿಳಿಸಿತ್ತು.

ಈ ವರದಿ ಪತ್ರಿಕೆಯಲ್ಲಿ ಪ್ರಕಟವಾದರೂ ಆನ್ ಲೈನ್ ಆವೃತ್ತಿಯಲ್ಲಿ ಈ ವರದಿಯನ್ನು ಡಿಲಿಟ್ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News