ಅಲ್ಕಾ ಲಾಂಬಾ ಕಾಂಗ್ರೆಸ್ ಸೇರ್ಪಡೆ

Update: 2019-10-12 17:33 GMT

 ಹೊಸದಿಲ್ಲಿ, ಅ.12: ಆಮ್ ಆದ್ಮಿ ಪಕ್ಷದ ಶಾಸಕಿ ಅಲ್ಕಾ ಲಾಂಬಾ ಪಕ್ಷಕ್ಕೆ ರಾಜೀನಾಮೆ ನೀಡಿ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದಾರೆ. ಪಕ್ಷಕ್ಕೆ ವಾಪಸಾದ ಅವರನ್ನು ಕಾಂಗ್ರೆಸ್ ದಿಲ್ಲಿ ಘಟಕಾಧ್ಯಕ್ಷ ಪಿಸಿ ಚಾಕೊ ಹಾಗೂ ಇತರ ಮುಖಂಡರು ಸ್ವಾಗತಿಸಿದರು.

  ಕಾಂಗ್ರೆಸ್‌ನಲ್ಲಿದ್ದ ಅಲ್ಕಾ ಲಾಂಬಾ ಬಳಿಕ ಪಕ್ಷದ ನಾಯಕತ್ವದೊಂದಿಗೆ ಮುನಿಸಿಕೊಂಡು ಆಮ್ ಆದ್ಮಿ ಪಕ್ಷ ಸೇರಿ ಚಾಂದ್‌ನಿ ಚೌಕದಿಂದ ಶಾಸಕಿಯಾಗಿ ಆಯ್ಕೆಗೊಂಡಿದ್ದರು. ಆದರೆ ಆಪ್ ಮುಖಂಡರ ಕೆಲವು ನಿರ್ಧಾರಗಳ ಬಗ್ಗೆ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿ ವಿವಾದ ಹುಟ್ಟುಹಾಕಿದ್ದರು. ಮಾಜಿ ಪ್ರಧಾನಿ ದಿ ರಾಜೀವ್ ಗಾಂಧಿಯವರಿಗೆ ನೀಡಲಾಗಿರುವ ಭಾರತ್ ರತ್ನ ಪುರಸ್ಕಾರವನ್ನು ರದ್ದುಗೊಳಿಸಬೇಕೆಂಬ ಪಕ್ಷದ ನಿರ್ಧಾರಕ್ಕೆ ಆಕ್ಷೇಪ ಎತ್ತಿದ್ದರು. ಈ ನಿರ್ಣಯವನ್ನು ಬೆಂಬಲಿಸಬೇಕು ಎಂಬ ಪಕ್ಷದ ಸೂಚನೆಯನ್ನೂ ಧಿಕ್ಕರಿಸಿದ್ದರು.

 ಬಳಿಕ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ದಿಲ್ಲಿಯಲ್ಲಿ ಪಕ್ಷದ ಪರ ಪ್ರಚಾರ ನಡೆಸಲು ನಿರಾಕರಿಸಿದ್ದರು. ನಂತರ ಅವರನ್ನು ಸ್ಪೀಕರ್ ದಿಲ್ಲಿ ವಿಧಾನಸಭೆಯಿಂದ ಅನರ್ಹಗೊಳಿಸಿದ್ದರು. ದಿಲ್ಲಿ ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News